ತಮಿಳುನಾಡು: ಟಿಕ್ ಟಾಕ್ ವಿಡಿಯೋ ವಿಚಾರವಾಗಿ ಸ್ನೇಹಿತನಿಂದಲೇ ಹತ್ಯೆಯಾದ ಯುವಕ!
ಟಿಕ್ ಟಾಕ್ ವಿಡಿಯೋ ಅಪ್ ಲೋಡ್ ಮಾಡಿದ್ದ ಯುವಕನೊರ್ವನನ್ನು ಆತನ ಸ್ನೇಹಿತನೇ ಹತ್ಯೆ ಮಾಡಿರುವ ಘಟನೆ ತಿರುತಾಣಿ ಬಳಿಯ ತಲ್ಲಂಬೇಡು ಗ್ರಾಮದಲ್ಲಿ ನಡೆದಿದೆ.ವಿಜಯ್ ಮೃತಪಟ್ಟ ಯುವಕನಾಗಿದ್ದಾನೆ.

ಚೆನ್ನೈ: ಟಿಕ್ ಟಾಕ್ ವಿಡಿಯೋ ಅಪ್ ಲೋಡ್ ಮಾಡಿದ್ದ ಯುವಕನೊರ್ವನನ್ನು ಆತನ ಸ್ನೇಹಿತನೇ ಹತ್ಯೆ ಮಾಡಿರುವ ಘಟನೆ ತಿರುತಾಣಿ ಬಳಿಯ ತಲ್ಲಂಬೇಡು ಗ್ರಾಮದಲ್ಲಿ ನಡೆದಿದೆ.ವಿಜಯ್ ಮೃತಪಟ್ಟ ಯುವಕನಾಗಿದ್ದಾನೆ.
ಆರೋಪಿ ವೆಂಕಟರಾಮನ್ ಒಂದು ನಿರ್ದಿಷ್ಟ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಡಿಯೋವನ್ನು ವಿಜಯ್ ಟಿಕ್ ಟಾಕ್ ನಲ್ಲಿ ಅಪ್ ಲೋಡ್ ಮಾಡಿದ್ದ. ಇದು ವೈರಲ್ ಆಗಿ, ಈ ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.
ಗ್ರಾಮಸ್ಥರ ಪ್ರತಿಭಟನೆ ತಿಳಿದು ಈ ಇಬ್ಬರೂ ಯುವಕರು ಬಚ್ಚಿಟ್ಟುಕೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದೆಂದು ಕಾಯ್ದಿದಿದ್ದಾರೆ. ನಂತರ ಹುಡುಕಾಟ ನಡೆಸಿದ ಪೊಲೀಸರು , ವಿಚಾರಣೆಗಾಗಿ ವೆಂಕಟರಾಮನ್ ತಂದೆಯನ್ನು ಬಂಧಿಸಿದ್ದಾರೆ.
ವಿಡಿಯೋ ಅಪ್ ಲೋಡ್ ಮಾಡಿದ ವಿಜಯ್ ಇದಕ್ಕೆಲ್ಲಾ ಕಾರಣ ಎಂದು ಕ್ರೋದಗೊಂಡ ವೆಂಕಟರಾಮನ್ , ಮಾರಕಾಸ್ತ್ರಗಳಿಂದ ವಿಜಯ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ . ನಂತರ ತಿರುತಾಣಿ ಠಾಣೆಗೆ ತೆರಳಿ ಶರಣಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


