ದೇಶ

ಬಿಕಾನೆರ್ ಯುವಕನಿಂದ ಪುಲ್ವಾಮಾ ಹುತಾತ್ಮ ಯೋಧರಿಗೆ ವಿಶಿಷ್ಟ ಶ್ರದ್ಧಾಂಜಲಿ

ರಾಜಸ್ಥಾನದ ಯುವಕನೊಬ್ಬ ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಬಿಕಾನೆರ್ ಯುವಕನಿಂದ ಪುಲ್ವಾಮಾ ಹುತಾತ್ಮ ಯೋಧರಿಗೆ ವಿಶಿಷ್ಟ ಶ್ರದ್ಧಾಂಜಲಿ
ಗೋಪಾಲ್ ಶಹರನ್
Published On :
ಬಿಕಾನೆರ್: ರಾಜಸ್ಥಾನದ ಯುವಕನೊಬ್ಬ ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬಿಕಾನೆರದ ಭಗತ್ ಸಿಂಗ್ ಯುವ ಬ್ರಿಗೇಡ್ ಸದಸ್ಯ ಗೋಪಾಲ್ ಶಹರನ್ ಅವರು ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ 42 ಸಿಆರ್ ಪಿಎಫ್ ಯೋಧರು ಸೇರಿ 71 ಹುತಾತ್ಮ ಯೋಧರ ಹೆಸರನ್ನ ತನ್ನ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡು ದೇಶಪ್ರೇಮವನ್ನ ಮೆರೆದಿದ್ದಾನೆ.
ಗೋಪಾಲ್ ತನ್ನ ಶರೀರದ ಮೇಲೆ 71 ಹುತಾತ್ಮ ಯೋಧರ ಹೆಸರನ್ನ ಹಚ್ಚೆ ಹಾಕಿಸಿಕೊಂಡಿದ್ದಾನೆ. ಇದರಲ್ಲಿ ಮೊನ್ನೆಯಷ್ಟೇ ಹುತಾತ್ಮರಾದ 42 ಜನ ಯೋಧರ ಹೆಸರ ಜೊತೆಗೆ ಬಿಕಾನೆರ್ ಜಿಲ್ಲೆಯ 20 ಹಾಗು ರತನಗಢ್ ನ 9 ಸೈನಿಕರ ಹೆಸರುಗಳೂ ಇವೆ. ಈ ಹೆಸರುಗಳ ಹೊರತಾಗಿ ತನ್ನ ಬೆನ್ನ ಮೇಲೆ ಈ ಯುವಕ ತ್ರಿವರ್ಣ ಧ್ವಜವನ್ನೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.