ಪುಲ್ವಾಮ ಉಗ್ರ ದಾಳಿಗೆ ಇಂತಹ ಭಂಡರೇ ಕಾರಣ ...! ಆಘಾತಕಾರಿ ವಿಡಿಯೋ ನೋಡಿ..
ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 44 ಮಂದಿ ವೀರ ಯೋಧರು ಸಾವನ್ನಪ್ಪಿದ್ದಾರೆ. ಆದರೆ ಕಣಿವೆ ರಾಜ್ಯದಲ್ಲಿ ಸ್ಥಳೀಯರ ನೆರವಿಲ್ಲದೇ ಇಂತಹ ಹೀನ ಕೃತ್ಯವೆಸಗಲು ಉಗ್ರರಿಂದ ಸಾಧ್ಯವೇ ಇಲ್ಲ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ದೊರೆತಿದೆ.

Published On :
ಶ್ರೀನಗರ: ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 44 ಮಂದಿ ವೀರ ಯೋಧರು ಸಾವನ್ನಪ್ಪಿದ್ದಾರೆ. ಆದರೆ ಕಣಿವೆ ರಾಜ್ಯದಲ್ಲಿ ಸ್ಥಳೀಯರ ನೆರವಿಲ್ಲದೇ ಇಂತಹ ಹೀನ ಕೃತ್ಯವೆಸಗಲು ಉಗ್ರರಿಂದ ಸಾಧ್ಯವೇ ಇಲ್ಲ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ದೊರೆತಿದೆ.
ಹೌದು.. ಪುಲ್ವಾಮ ದಾಳಿ ಬೆನ್ನಲ್ಲೇ ಕಾಶ್ಮೀರದ ಸ್ಥಳೀಯರು ಉಗ್ರರಿಗೆ ನೆರವು ನೀಡುತ್ತಿರುವ ಮತ್ತು ಉಗ್ರರನ್ನು ಸ್ವತಂತ್ರ ಯೋಧರಂತೆ ಬಿಂಬಿಸಿ ಅವರಿಗೆ ಗೌರವ ನೀಡುತ್ತಿರುವ ಮತ್ತು ಸೇನಾ ಕಾರ್ಯಾಚರಣೆ ವೇಳೆ ಕುತಂತ್ರದಿಂದ ಕಲ್ಲು ತೂರಾಟದ ನೆಪದಲ್ಲಿ ಅವರನ್ನು ಪರಾರಿ ಮಾಡಿಸಲು ನೆರವು ನೀಡುತ್ತಿರುವ ಆಘಾತಕಾರಿ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೊಂದು ವಿಡಿಯೋ ದೇಶ ವಿರೋಧಿ ಕಾಶ್ಮೀರಿಗಳ ಭಂಡತನದ ಪ್ರದರ್ಶನ ಮಾಡುತ್ತಿದ್ದು, ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನಮ್ಮನ್ನು ಕಾಯುವ ನಮಗೆ ರಕ್ಷಣೆ ನೀಡುವ ಯೋಧರು ಗಡಿಯಲ್ಲಿ ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುದನ್ನು ತಿಳಿಸುತ್ತದೆ.
ಆದರೆ ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಿದ್ದು, ವಿಡಿಯೋದಲ್ಲಿರುವ ಉಗ್ರರು ಯಾರು ಎಂಬುದರ ಬಗ್ಗೆ ಮಾಹಿತಿ ಇಲ್ಲ.
(ವಾಟ್ಸಪ್ ವಿಡಿಯೋ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


