ದೇಶ

ಪುಲ್ವಾಮ ಉಗ್ರ ದಾಳಿ ಹಿಂದೆ ಪಾಕ್ ಗುಪ್ತಚರ ಇಲಾಖೆ ಕೈವಾಡ: ಸೇನಾಧಿಕಾರಿ ಜುಲ್ಫಿಕರ್ ಹಸನ್

44 ಮಂದಿ ಸೈನಿಕರ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಗುಪ್ತರಚರ ಇಲಾಖೆ ಐಎಸ್ಐನ ಕೈವಾಡವಿದೆ ಎಂದು ಭಾರತೀಯ ಸೇನೆ ಹೇಳಿದೆ.

ಪುಲ್ವಾಮ ಉಗ್ರ ದಾಳಿ ಹಿಂದೆ ಪಾಕ್ ಗುಪ್ತಚರ ಇಲಾಖೆ ಕೈವಾಡ: ಸೇನಾಧಿಕಾರಿ ಜುಲ್ಫಿಕರ್ ಹಸನ್
ಸೇನಾಧಿಕಾರಿಗಳ ಸುದ್ದಿಗೋಷ್ಠಿ
Published On :
ನವದೆಹಲಿ: 44 ಮಂದಿ ಸೈನಿಕರ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಗುಪ್ತರಚರ ಇಲಾಖೆ ಐಎಸ್ಐನ ಕೈವಾಡವಿದೆ ಎಂದು ಭಾರತೀಯ ಸೇನೆ ಹೇಳಿದೆ.
ಈ ಬಗ್ಗೆ ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾಧಿಕಾರಿ ಜುಲ್ಫಿಕರ್ ಹಸನ್ ಹಾಗೂ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಉಗ್ರ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿದೆ ಎಂದು  ಹೇಳಿದ್ದಾರೆ. 'ಪುಲ್ವಾಮ ಉಗ್ರ ದಾಳಿ ಘಟನಾ ಪ್ರದೇಶದಲ್ಲಿ ನಮಗೆ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿವೆ. ಈ ಸಾಕ್ಷ್ಯಗಳೇ ದಾಳಿಯಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐನ ಪಾತ್ರದ ಕುರಿತು ಮಾಹಿತಿ ನೀಡುತ್ತಿದೆ. ಆದರೆ ಈ ಸಾಕ್ಷ್ಯಾಧಾರಗಳನ್ನು ನಾವು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಜುಲ್ಫಿಕರ್ ಹಸನ್ ಹೇಳಿದರು.
ಅಂತೆಯೇ ಕಳೆದ 2 ವರ್ಷಗಳಿಂದ ಕಣಿವೆ ರಾಜ್ಯದಲ್ಲಿ ಉಗ್ರ ಸಂಘಟನೆ ಸೇರುತ್ತಿರುವ ಯುವಕರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಇದರಲ್ಲಿ ಸೇನೆಯ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆಯೋ ಅಂತೆಯೇ ಕಣಿವೆ ರಾಜ್ಯಜದಲ್ಲಿನ ತಾಯಂದಿರ ಮತ್ತು ಅವರ ಕುಟುಂಬಸ್ಥರ ಪಾತ್ರವೂ ಕೂಡ ಗಣನೀಯವಾಗಿ ಕೆಲಸ ಮಾಡಿದೆ. ಇದಕ್ಕಾಗಿ ಸೇನೆ, ಕಾಶ್ಮೀರಿ ತಾಯಂದಿರಿಗೆ ಧನ್ಯವಾದ ಸಲ್ಲಿಸುತ್ತದೆ ಎಂದು ಹೇಳಿದರು.
ಅಂತೆಯೇ ಪಾಕಿಸ್ತಾನದಿಂದ ಯಾರೇ ಆಗಲಿ ಗಡಿಯೊಳಗೆ ನುಸುಳಿ ಬಂದರೆ ಖಂಡಿತಾ ಅವರು ಜೀವ ಸಹಿತ ಪಾಕಿಸ್ತಾನಕ್ಕೆ ಮರಳುವುದಿಲ್ಲ. ಸೇನೆ ಮತ್ತು ಸರ್ಕಾರ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಹೀಗಾಗಿ ಅಕ್ರಮ ನುಸುಳುಕೋರರು ಕಂಡುಬಂದ ಕೂಡಲೇ ಅವರು ಶರಣಾಗತರಾಗದಿದ್ದರೆ ಕಂಡಲ್ಲಿ ಗುಂಡು ಹಾರಿಸುತ್ತೇವೆ ಎಂದು ಹಸನ್ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.