ಲೋಕಸಭಾ ಚುನಾವಣೆ: 10 ವರ್ಷಗಳ ನಂತರ ಪಿಎಂಕೆ ಜೊತೆ ಎಐಎಡಿಎಂಕೆ ಚುನಾವಣಾ-ಪೂರ್ವ ಮೈತ್ರಿ
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊಸ್ತಿಲಲ್ಲೇ ತಮಿಳುನಾಡಿನ ಪಾಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷಗಳು ಚುನಾವಣಾ ...

Published On :
ಚೆನ್ನೈ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊಸ್ತಿಲಲ್ಲೇ ತಮಿಳುನಾಡಿನ ಪಾಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ.
ಎಐಡಿಎಂಕೆ ಸಂಯೋಜಕ ಪನ್ನೀರ್ ಸೆಲ್ವಂ ಮತ್ತು ಜಂಟಿ ಸಂಯೋಜಕ ಕೆ ಪಳನಿಸ್ವಾಮಿ ಪಿಎಂಕೆ ಸಹ ಸಂಸ್ಥಾಪಕ ಎಸ್ ರಾಮೋದಾಸ್ ಅವರೊಂದಿಗೆ ಮೈತ್ರಿಗೆ ಸಹಿ ಮಾಡಿವೆ, 10 ವರ್ಷಗಳ ನಂತರ ಈ ಎರಡು ಪಕ್ಷಗಳು ಮತ್ತೆ ಮೈತ್ರಿಗೆ ಕೈ ಜೋಡಿಸಿವೆ,
39 ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಎಐಎಡಿಎಂಕೆ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಪಿಎಂಕೆ ಒಂದು ರಾಜ್ಯಸಭೆ ಮತ್ತು ಆರು ಲೋಕಸಭೆ ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಎಐಎಡಿಎಂಕೆ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ತಿಳಿಸಿದರು.
ಪಿಎಂಕೆ ಸಂಸ್ಥಾಪಕ ಡಾ. ಎಸ್. ರಾಮದಾಸ್ ಮತ್ತು ಅವರ ಮಗ, ಸಂಸದ ಅನ್ಬುಮಣಿ ರಾಮದಾಸ್, ಹಿರಿಯ ಮುಖಂಡ ಜಿಕೆ ಮಣಿ, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಮೈತ್ರಿ ಒಪ್ಪಂದವನ್ನು ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
AIADMKಲೋಕಸಭೆ ಚುನಾವಣೆತಮಿಳು ನಾಡುLok Sabha electionsPMKಪಿಎಂಕೆpre-poll allianceಚುನಾವಣಾ ಪೂರ್ವ ಮೈತ್ರಿTamil nadu. ಎಐಎಡಿಎಂಕೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


