'ಒಂದು ಅವಕಾಶ ಕೊಡಿ ಪಾಕಿಸ್ತಾನಕ್ಕೆ ನುಗ್ಗಿ 400 ತಲೆಗಳನ್ನು ತರುತ್ತೇವೆ' -ವಿಡಿಯೋ ವೈರಲ್
ಪುಲ್ವಾಮಾದಲ್ಲಿ ನಡೆದ ದಾಳಿ ಜನರ ಮನಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ಕಿಚ್ಚು ಹೆಚ್ಚಿಸಿರುವಂತೆ ಸೈನಿಕರೊಬ್ಬರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Published On :
ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ನಡೆದ ದಾಳಿ ಜನರ ಮನಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ಕಿಚ್ಚು ಹೆಚ್ಚಿಸಿರುವಂತೆ ಸೈನಿಕರೊಬ್ಬರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಅನುಮತಿ ನೀಡಿದ್ದರೆ ಸಾಕು, ನಾವು ಯಾವುದೋ ಒಂದು ಮಾರ್ಗದಿಂದ ಪಾಕಿಸ್ತಾನದೊಳಗೆ ನುಗ್ಗುತ್ತೇವೆ. ಒಬ್ಬ ಉಗ್ರವಾದಿ ನಮ್ಮ ನಲವತ್ತು ಸೈನಿಕರನ್ನು ಕೊಲ್ಲುತ್ತಾನೆ ಎಂದರೆ ನಾವೇಕೆ ಸುಮ್ಮನೆ ಇರಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ನಾಲ್ಕು ಜನ ಸ್ನೇಹಿತರಿದ್ದೇವೆ.ಉಳಿದವರು ವಿಡಿಯೋದಲ್ಲಿ ಬರಲು ಇಷ್ಟಪಡುತ್ತಿಲ್ಲ .ಆದರೆ, ಒಂದಂತೂ ನಿಜ ಪಾಕಿಸ್ತಾನಕ್ಕೆ ಹೇಗಾದರೂ ನುಗ್ಗಿ, ಕನಿಷ್ಟ ಪಕ್ಷ 400 ತಲೆಗಳನ್ನಾದರೂ ತರುತ್ತೇವೆ ಎಂದು ತರುಣ ಯೋಧ ಆಕ್ರೋಶದ ನುಡಿಗಳನ್ನಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


