ದೇಶ

ಹೈದರಾಬಾದ್: ಬಜರಂಗದಳ ಕಾರ್ಯಕರ್ತರಿಂದ ಯುವ ಜೋಡಿಗೆ ಬಲವಂತದ ಮದುವೆ

ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದ ಯುವ ಜೋಡಿಗೆ ಸ್ವಯಂ ಘೋಷಿತ ಬಜರಂಗದಳದ ಕಾರ್ಯಕರ್ತರು ಬಲವಂತದ ಮದುವೆ....

ಹೈದರಾಬಾದ್: ಬಜರಂಗದಳ ಕಾರ್ಯಕರ್ತರಿಂದ ಯುವ ಜೋಡಿಗೆ ಬಲವಂತದ ಮದುವೆ
ಸಾಂದರ್ಭಿಕ ಚಿತ್ರ
Published On :
ಹೈದರಾಬಾದ್: ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದ ಯುವ ಜೋಡಿಗೆ ಸ್ವಯಂ ಘೋಷಿತ ಬಜರಂಗದಳದ ಕಾರ್ಯಕರ್ತರು ಬಲವಂತದ ಮದುವೆ ಮಾಡಿಸಿದ ಘಟನೆ ಗುರುವಾರ ಮೆದ್ಕಲ್ ನ ಕೊಂಡಲಕೋಯ ಆಕ್ಸಿಜನ್ ಪಾರ್ಕ್ ನಲ್ಲಿ ನಡೆದಿದೆ.
ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಪಾರ್ಕ್ ಪ್ರವೇಶಿಸಿದ ಕಾರ್ಯಕರ್ತರು, ಅಲ್ಲಿ ಒಟ್ಟಿಗೆ ಮಾತನಾಡುತ್ತ ಕುಳಿತಿದ್ದ ಯುವ ಜೋಡಿಯೊಂದನ್ನು ನೋಡಿದ್ದಾರೆ. ಅವರ ಬಳಿ ಹೋಗಿ ನೀವು ನಿಜವಾದ ಪ್ರೇಮಿಗಳಾಗಿದ್ದರೆ ಮದುವೆಯಾಗಿ ಎಂದು ಒತ್ತಾಯಿಸಿದ್ದಾರೆ.
ನಂತರ ಹುಡುಗ ಹುಡುಗಿಗೆ ಅರಿಶಿಣದ ದಾರ ಕಟ್ಟು ದೃಶ್ಯವನ್ನು ಕಾರ್ಯಕರ್ತರು ವಿಡಿಯೋ ಮಾಡಿದ್ದು, ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 
ಬಜರಂಗದಳದ ಕಾರ್ಯಕರ್ತರು ಇದು ಮಂಗಳಕರವಾದ ದಿನ ಎಂದು ಕೂಗುತ್ತಿರುವುದು ಹಾಗೂ ಮದುವೆ ನಂತರ ಯುವ ಜೋಡಿಗೆ ಹಾರೈಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. 
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೆದ್ಕಲ್ ಪೊಲೀಸರು, ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ನವದಂಪತಿಗಳನ್ನು ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸ್ ಉಪ ಆಯುಕ್ತ ಪಿವಿ ಪದ್ಮಜಾ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.