2019ರಲ್ಲೂ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿಯಾಗಲಿ: ಮುಲಾಯಂ ಸಿಂಗ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೇ ಪ್ರಧಾನಿಯಾಗದಂತೆ ತಡೆಯೊಡ್ಡಳು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ 30 ವರ್ಷಗಳ ದ್ವೇಷ ಮರೆತು ಬಿಎಸ್ಪಿ

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೇ ಪ್ರಧಾನಿಯಾಗದಂತೆ ತಡೆಯೊಡ್ಡಳು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಎಸ್‌ಪಿ ನಾಯಕಿ ಮಯಾವತಿ ಜತೆ ಸೇರಿ ಮಹಾಘಟಬಂಧನ್ ರಚಿಸಿದ್ದರೆ ಇತ್ತ ಅಖಿಲೇಶ್ ಯಾದವ್ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಮಾತ್ರ 2019ರಲ್ಲೂ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿಯಾಗಲಿ ಆ ತಾಕತ್ತು ಇರುವುದು ಅವರೊಬ್ಬರಿಗೆ ಎಂದು ಸಂಸತ್ ಸದನದಲ್ಲಿ ಹೇಳಿದ್ದಾರೆ.
ಲೋಕಸಭೆಗೂ ಮುನ್ನ ಮುಲಾಯಂ ಸಿಂಗ್ ಯಾದವ್ ಅವರ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿರೋಧಿ ಪಕ್ಷದಲ್ಲಿದ್ದು ಪ್ರಧಾನಿ ಅವರನ್ನು ಹೊಗಳಿರುವುದು ಮಹಾಘಟಬಂದನ್ ಗೆ ನುಂಗಲಾರದ ತುತ್ತಾಗಿದೆ.
ಲೋಕಸಭೆಯಲ್ಲಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್ ಅವರು 2019ರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಆರಿಸಿ ಬರಲಿ. ಪ್ರಧಾನಿ ಮೋದಿ ಸಮೇತ ಲೋಕಸಭೆಗೆ ಇದೇ ಸಂಸದರು ಮತ್ತೊಮ್ಮೆ ಆರಿಸಿ ಬರಲಿ ಎಂದರು.
ಪ್ರಧಾನಿಯಾಗಿ ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ. ಆದರೆ ಅಂತಹ ಪ್ರಯತ್ನದಲ್ಲಿ ಮೋದಿ ಶ್ರಮಿಸಿದ್ದಾರೆ ಎಂದು ಹೇಳಿದರು. ಈ ವೇಳೆ ಮುಲಾಯಂ ಸಿಂಗ್ ಪಕ್ಕದಲ್ಲೇ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕುಳಿದ್ದರು. ಈ ವೇಳೆ ಮುಲಾಯಂ ಸಿಂಗ್ ಈ ಹೇಳಿಕೆ ಅವರನ್ನು ವಿಚಲಿತರಾಗುವಂತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿಮುಲಾಯಂ ಸಿಂಗ್ ಯಾದವ್Mulayam Singh YadavAkhilesh Yadavಅಖಿಲೇಶ್ ಯಾದವ್ಮಾಯಾವತಿMayavathi
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


