ಲೋಕಸಭಾ ಚುನಾವಣೆ: ಗುರುದಾಸ್ ಪುರದಿಂದ ಸ್ಪರ್ಧಿಸಲು ಕವಿತಾ ಖನ್ನಾ ಒಲವು
ಬಾಲಿವುಡ್ ದಿವಂಗತ ನಟ ಹಾಗೂ ರಾಜಕಾರಣಿ ವಿನೋದ್ ಖನ್ನಾ ಸ್ಪರ್ಧಿಸುತ್ತಿದ್ದ ಪಂಜಾಬಿನ ಗುರುದಾಸ್ ಪುರ ಕ್ಷೇತ್ರದಿಂದ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವರ ಪತ್ನಿ ಕವಿತಾ ಖನ್ನಾ ಒಲವು ವ್ಯಕ್ತಪಡಿಸಿದ್ದಾರೆ.

ಪಠಾಣ್ ಕೋಟ್ : ಬಾಲಿವುಡ್ ದಿವಂಗತ ನಟ ಹಾಗೂ ರಾಜಕಾರಣಿ ವಿನೋದ್ ಖನ್ನಾ ಸ್ಪರ್ಧಿಸುತ್ತಿದ್ದ ಪಂಜಾಬಿನ ಗುರುದಾಸ್ ಪುರ ಕ್ಷೇತ್ರದಿಂದ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವರ ಪತ್ನಿ ಕವಿತಾ ಖನ್ನಾ ಒಲವು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಕವಿತಾ, ಗುರುದಾಸ್ ಪುರ ಕ್ಷೇತ್ರದ ಜನರು ನನ್ನನ್ನು ಸಂಸದರಾಗಿ ನೋಡಲು ಬಯಸುತ್ತಿದ್ದು, ಅವರಿಗೆ ನಿರಾಶೆ ಮೂಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆದಾಗ್ಯೂ, ಅಭ್ಯರ್ಥಿ ಆಯ್ಕೆ ಅಂತಿಮ ನಿರ್ಧಾರ ಬಿಜೆಪಿಗೆ ಬಿಟ್ಟದ್ದು ಎಂದು ಅವರು ಹೇಳಿದರು.
ಈ ಕ್ಷೇತ್ರದೊಂದಿಗೆ 20 ವರ್ಷಗಳಿಂದಲೂ ಒಡನಾಟ ಹೊಂದಿದ್ದು, ಜನರ ಭಾವನೆ ಎಂತಹುದು ಎಂಬುದು ಎಲ್ಲರಿಗೂ ಗೊತ್ತಿದೆ. ಜನರು ಕೂಡಾ ಸಂಸದೆಯಾಗಲು ಬಯಸುತ್ತಿದ್ದಾರೆ. ಒಂದು ವೇಳೆ ತಾನೂ ಅಭ್ಯರ್ಥಿಯಾದರೆ ಸುಲಭವಾಗಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿನೋದ್ ಖನ್ನಾ ಪತ್ನಿ ಎಂಬ ಕಾರಣದಿಂದ ಈ ಮಾತನ್ನು ಹೇಳುತ್ತಿಲ್ಲ. ಕ್ಷೇತ್ರ ಪರಿಚಯವಿದ್ದು, ಜನರೊಂದಿಗೆ ಸಂಪರ್ಕವಿದೆ. ಯಾವುದೇ ಕೆಲಸ ನೀಡಿದ್ದರೂ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸುವುದಾಗಿ ಕವಿತಾ ಹೇಳಿದ್ದಾರೆ.
ವಿನೋದ್ ಖನ್ನಾ ತಮ್ಮ ಅಭಿವೃದ್ದಿ ಪರ ಕಾರ್ಯಗಳಿಂದಾಗಿ ಗುರುದಾಸ್ ಪುರ ಕ್ಷೇತ್ರದ ಜನರ ಪ್ರೀತಿ ಪಾತ್ರರಾಗಿದ್ದರು.
ಜನವರಿ 3ರಂದು ಗುರುದಾಸ್ ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿನೋದ್ ಖನ್ನಾ ಅವರ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದ್ದರು. ಕ್ಷೇತ್ರದ ಅಭಿವೃದ್ದಿಗಾಗಿ ವಿನೋದ್ ಖನ್ನಾ ಪ್ರಯತ್ನಿಸಿದ್ದರು ಎಂದು ಮೋದಿ ಅವರು ಹೇಳಿದ್ದರು.ವಿನೋದ್ ಖನ್ನಾ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷದ ಸುನೀಲ್ ಜಾಖರ್ ಪ್ರಸ್ತುತ ಇಲ್ಲಿನ ಸಂಸದರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


