ಅಕ್ರಮ ಆಸ್ತಿ: ವಾದ್ರಾ ಎರಡನೇ ದಿನದ ವಿಚಾರಣೆ ಅಂತ್ಯ
ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯ ಸೋದರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರನ್ನು ಎರಡನೇ ದಿನ....

Published On :
ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯ ಸೋದರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರನ್ನು ಎರಡನೇ ದಿನ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿದೇಶಗಳಲ್ಲಿ ಅಕ್ರಮ ಆಸ್ತಿ, ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ಈ ವಿಚಾರಣೆ ನಡೆಸಿದೆ.ಆರು ಗಂಟೆಗಳ ಕಾಲ ಅವರು ವಾದ್ರಾ ಅವರನ್ನು ಪ್ರಶ್ನಿಸಿದ್ದಾರೆ.
ವಾದ್ರಾ ರಾತ್ರಿ 9.30ರ ಸುಮಾರಿಗೆ ವಿಚಾರಣೆ ಪೂರ್ಣಗೊಳಿಸಿ ಇಡಿ ಕಛೇರಿಯಿಂದ ಹೊರಬಂದಿದ್ದಾರೆ. ಅಷ್ಟರಲ್ಲಿ ಅಲ್ಲಿ ಹಾಜರಿದ್ದ ಪ್ರಿಯಾಂಕಾ ಗಾಂಧಿ ತಮ್ಮ ಪತಿ ವಾದ್ರಾರನ್ನು ತಮ್ಮ ಕಾರಿನಲ್ಲೇ ಕುಳ್ಳರಿಸಿಕೊಂಡು ತೆರಳುವ ಮೂಲಕ ತಮ್ಮ ನೈತಿಕ ಬೆಂಬಲ ಸೂಚಿಸಿದ್ದಾರೆ.
ಯುನೈಟೆಡ್ ಕಿಂಗ್ ಡಮ್ ನಲ್ಲಿ ಸ್ಥಿರಾಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿರುವುದರ ಕುರಿತು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಅಗತ್ಯವಿರುವ ಕಾರಣ ವಾದ್ರಾ ಗುರುವಾರ ಮತ್ತೆ ತನಿಖೆಗೆ ಆಗಮಿಸಬೇಕೆಂದು ಇಡಿ ಸೂಚಿಸಿತ್ತು.
ಇದಕ್ಕೆ ಮುನ್ನ ನಿನ್ನೆ (ಬುಧವಾರ) ಸಹ ವಾದ್ರಾ ಅವರ ವಿಚಾರಣೆ ನಡೆದ್ತ್ತು. ಅದಾಗ ಸುಮಾರು ಐದೂವರೆ ತಾಸು ವಿಚಾರಣೆ ನಡೆದಿದ್ದು ಆಗಲೂ ಪ್ರಿಯಾಂಕಾ ಅವರೇ ವಾದ್ರಾರನ್ನು ಇಡಿ ಕಛೇರಿಯ ಬಳಿ ಬಿಟ್ಟು ತೆರಳಿದ್ದರು.
ಸಂಜಯ್ ಭಂಡಾರಿ ಅವರೊಂದಿಗೆ ಸಂಬಂಧ ಸೇರಿದಂತೆ ಅನೇಕ ವಿಚಾರದ ಕುರಿತು ವಾದ್ರಾರನ್ನು ಪ್ರಶ್ನಿಸಲಾಗಿದೆ ಎಂದು ಮೂಲಗಳು ಹೇಳಿದೆ.ವದ್ರಾ ಅವರು ಪ್ರಕರಣದ ತನಿಖಾಧಿಕಾರಿಗಳೊಂದಿಗೆ ದಾಖಲೆಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಈ ನಡುವೆ ವಾದ್ರಾ ಪರ ವಕೀಲರಾದ ಕೆಟಿಎಸ್ ತುಳಸಿ, "ಇಡಿ ಅಧಿಕಾರಿಗಳು ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
money laundering caseRobert Vadraರಾಬರ್ಟ್ ವಾದ್ರಾPriyanka Gandhiಪ್ರಿಯಾಂಕಾ ಗಾಂಧಿEDಇಡಿಹಣ ವರ್ಗಾವಣೆ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


