ಎತ್ತರದ ಪ್ರದೇಶಗಳಲ್ಲಿ ದೇಶ ಕಾಯುವ ಯೋಧರಿಗೆ ಸ್ವದೇಶಿ ನಿರ್ಮಿತ ಸಮವಸ್ತ್ರ: ಸೇನೆ
ಎತ್ತರದ ಪರ್ವತ ಪ್ರದೇಶಗಳಲ್ಲಿ ದೇಶ ಕಾಯುವ ಯೋಧರಿಗೆ ಚಳಿ, ಗಾಳಿಯಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸ್ವದೇಶಿ ನಿರ್ಮಿತ ಉಡುಪು ಹಾಗೂ ಇನ್ನಿತರ ಸಲಕರಣೆಗಳನ್ನು ಭಾರತೀಯ ಸೇನೆ ಖರೀದಿಸುತ್ತಿದೆ.

ನವದೆಹಲಿ: ಎತ್ತರದ ಪರ್ವತ ಪ್ರದೇಶಗಳಲ್ಲಿ ದೇಶ ಕಾಯುವ ಯೋಧರಿಗೆ ಚಳಿ, ಗಾಳಿಯಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸ್ವದೇಶಿ ನಿರ್ಮಿತ ಉಡುಪು ಹಾಗೂ ಇನ್ನಿತರ ಸಲಕರಣೆಗಳನ್ನು ಭಾರತೀಯ ಸೇನೆ ಖರೀದಿಸುತ್ತಿದೆ.
ವಿವಿಧ ಕಡೆಗಳಲ್ಲಿನ ಎತ್ತರದ ಪ್ರದೇಶಗಳಲ್ಲಿ ಸುಮಾರು 40 ಸಾವಿರ ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಅವರ ಉಡುಪಿಗಾಗಿ ಪ್ರತಿ ಆರು ವರ್ಷಕ್ಕೊಮ್ಮೆ ತಗಲುತ್ತಿದ್ದ 2.5 ಕೋಟಿ ಆಮದು ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಸ್ಥಳೀಯ ತಯಾರಕರನ್ನು ಆಯ್ಕೆಮಾಡುವ ಪ್ರಸ್ತಾವನ್ನು ಸೇನೆ ಪ್ರಾರಂಭಿಸಿದೆ.
ಎತ್ತರದ ಪ್ರದೇಶಗಳಲ್ಲಿ 10 ಡಿ ಸೆಲ್ಸಿಯಸ್ ಗಿಂತಲೂ ಕಡಿಮೆ ಉಷ್ಠಾಂಶದಲ್ಲಿ ಸೈನಿಕರು ಸೇವೆ ಸಲ್ಲಿಸುತ್ತಾರೆ. ಅಂತಹ ವಾತಾವರಣಕ್ಕನುಗುಣವಾಗಿ ಹಗುರವಾದ ಬಟ್ಟೆಗಳ ಅಗತ್ಯವಿದೆ. ಪ್ರತಿ ಆರು ತಿಂಗಳಿಗೊಮ್ಮೆ ಸೇನೆಗಾಗಿ ಉಡುಪು ಹಾಗೂ ಮತ್ತಿತರ ಸಲಕರಣೆಗಳನ್ನು ಬದಲಾಯಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


