ದೇಶ

ಭೀಮಾ ಕೊರೆಗಾಂವ್ ಪ್ರಕರಣ: ಹೋರಾಟಗಾರ ಆನಂದ್ ತೆಲ್ತುಂಬೆಡ್ ಬಿಡುಗಡೆಗೆ ಪುಣೆ ಕೋರ್ಟ್ ಆದೇಶ

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಿಗ್ಗೆ ಪೌಣೆ ಪೋಲೀಸರು ಖ್ಯಾತ ದಲಿತ ಹೋರಾಟಗಾರ ಆನಂದ್ ತೆಲ್ತುಂಬೆಡ್ ಅವರನ್ನು....

ಭೀಮಾ ಕೊರೆಗಾಂವ್ ಪ್ರಕರಣ:   ಹೋರಾಟಗಾರ ಆನಂದ್ ತೆಲ್ತುಂಬೆಡ್ ಬಿಡುಗಡೆಗೆ ಪುಣೆ ಕೋರ್ಟ್ ಆದೇಶ
ಆನಂದ್ ತೆಲ್ತುಂಬೆಡ್
Published On :
ಪುಣೆ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಿಗ್ಗೆ ಪೌಣೆ ಪೋಲೀಸರು ಖ್ಯಾತ ದಲಿತ ಹೋರಾಟಗಾರ ಆನಂದ್ ತೆಲ್ತುಂಬೆಡ್ ಅವರನ್ನು ಬಂಧಿಸಿದ್ದು ಈ ಬಂಧನ ಕಾನೂನುಬಾಹಿರ ಎಂದ ಪುಣೆ ಸೆಷನ್ಸ್ ಕೋರ್ಟ್ ತಕ್ಷಣ ಆನಂದ್ ಅವರ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೋರಾಟಗಾರ ಆನಂದ್ ತೆಲ್ತುಂಬೆಡ್ ಫೆಬ್ರವರಿ 11ರವರೆಗೆ ಬಂಧನ ವಿರುದ್ಧ  ಮಧ್ಯಂತರ ತಡೆ ಕೋರಿದ್ದಾರೆ.ಅಷ್ಟರಲ್ಲಿ, ಅವರು ಸೆಷನ್ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಲ್ಲಿ ಜಾಮೀನಿಗಾಗಿ ಅಥವಾ ಬಂಧನ ಪೂರ್ವ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.
ಪುಣೆ ಸೆಷನ್ಸ್ ಕೋರ್ಟ್ ಶುಕ್ರವಾರ ಆನಂದ್ ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿತ್ತು. ಮತ್ತು ಅವರನ್ನು ಮುಂಬೈನ ವಿಲ್ಲೆ ಪಾರ್ಲೆ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು.
ಭೀಮಾ-ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪುಣೆ ಪೋಲೀಸರು ಆನಂದ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಕಳೆದ ತಿಂಗಳು ತೆಲ್ತುಂಬೆಡ್ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು.
ಕಳೆದ ವರ್ಷ ಜನವರಿ 1ರಂದು ಪುಣೆ ಸಮೀಪದ ಭೀಮಾ-ಕೊರೆಗಾಂವ್ ನಲ್ಲಿ ಭೀಮಾ-ಕೊರೆಗಾಂವ್ದಂಗೆಯ ದ್ವಿಶತಮಾನೋತ್ಸವ ಸಂಭ್ರಮಾಚರಣೆ ನಡೆದ ವೇಳೆ ಭಾರೀ ಪ್ರಮಾಣದ ಹಿಂಸಾಚಾರ ಸಂಭವಿಸಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.