ಮಾಜಿ ಪ್ರಿಯಕರನನ್ನು ಸುತ್ತಿಗೆ ಮತ್ತು ಮಚ್ಚಿನಿಂದ ಕೊಚ್ಚಿ ಕೊಂದ ನಟಿ!
ತನ್ನ 38 ವರ್ಷದ ಮಾಜಿ ಪ್ರಿಯಕರನನ್ನು 42 ವರ್ಷದ ನಟಿಯೋರ್ವಳು ಲಾಂಗು ಮತ್ತು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.

ಚೆನ್ನೈ: ತನ್ನ 38 ವರ್ಷದ ಮಾಜಿ ಪ್ರಿಯಕರನನ್ನು 42 ವರ್ಷದ ನಟಿಯೋರ್ವಳು ಲಾಂಗು ಮತ್ತು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.
ತಮಿಳುನಾಡಿದ ಕೊಲತ್ತೂರಿನಲ್ಲಿ ಈ ಘಟನೆ ನಡೆದಿದ್ದು ಕಿರುತೆರೆ ನಟಿ ಎಸ್ ದೇವಿ ತಮ್ಮ ಸಹೋದರಿಯ ನಿವಾಸದಲ್ಲಿ ಆತನನ್ನು ಹೊಡೆದು ಸಾಯಿಸಿದ್ದಾಳೆ. ನಂತರ ಆಕೆ ಪೊಲೀಸರಿಗೆ ಶರಣಾಗಿದ್ದು ವಿಚಾರಣೆ ನಡೆಸಿದ ಬಲಿಕ ದೇವಿಯ ಗಂಡ, ಸಹೋದರಿ ಮತ್ತು ಸಹೋದರಿಯ ಪತಿಯನ್ನು ಬಂಧಿಸಿದ್ದು ಕೋರ್ಟ್ ಅವರನ್ನು ಜೈಲಿಗೆ ಕಳುಹಿಸಿದೆ.
38 ವರ್ಷದ ಎಂ ರವಿ ಮೃತ ದುರ್ದೈವಿ. ಈತ ಫಿಲ್ಮಂ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಎಂಟು ವರ್ಷಗಳ ಹಿಂದೆ ಮಧುರೈನ ರವಿ ಚೆನ್ನೈನಲ್ಲಿ ವಾಸವಾಗಿದ್ದರು. ಇನ್ನು ಎಸ್ ದೇವಿ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಸಂಬಂಧ ಏರ್ಪಟಿತ್ತು. ಈ ವಿಷಯ ತಿಳಿದ ಗಂಡ ಶಂಕರ್ ಮತ್ತು ಕುಟುಂಬ ಸದಸ್ಯರು ಆಕೆಯನ್ನು ಮನವೊಳಿಸಿ ಅಲ್ಲಿಂದ ಕರೆದುಕೊಂಡು ಹೋಗಿದ್ದರು.
ನಂತರ ಮನೆಯಲ್ಲೇ ಕುಳಿತು ಎಸ್ ದೇವಿ ಟೈಲರಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ದೇವಿ ತನ್ನ ಸಹೋದರಿ ಲಕ್ಷ್ಮಿ ಮನೆಯಲ್ಲಿರುವುದು ಪತ್ತೆ ಹಚ್ಚಿದ ರವಿ ಅಲ್ಲಿಗೆ ಬಂದು ಲಕ್ಷ್ಮಿ ಬಳಿ ನನ್ನ ಜೊತೆ ದೇವಿಯನ್ನು ಕಳುಹಿಸುವಂತೆ ಕೇಳಿದ್ದಾನೆ. ಕೂಡಲೇ ಲಕ್ಷ್ಮಿ, ದೇವಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಗಂಡನ ಜೊತೆ ಮನೆಗೆ ಬಂದ ದೇವಿಗೆ ರವಿ ಮತ್ತೆ ತನ್ನ ಜೊತೆ ಬರುವಂತೆ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ರವಿಯನ್ನು ಹತ್ಯೆ ಮಾಡಿದ್ದಾರೆ. ಘಟನೆ ಬಳಿಕ ದೇವಿ ತಾನೇ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಶರಣಾಗಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


