119 ವರ್ಷಗಳ ದಾಖಲೆ ಮುರಿದ ದೆಹಲಿಯ ಡಿಸೆಂಬರ್ ಚಳಿ!
ಈ ಬಾರಿ ಚಳಿಗಾಲ ಉತ್ತರ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಇಂದು ತಾಪಮಾನ 119 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದೆ.

ನವದೆಹಲಿ: ಈ ಬಾರಿ ಚಳಿಗಾಲ ಉತ್ತರ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಇಂದು ತಾಪಮಾನ 119 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದೆ.
ಹೌದು.. ರಾಷ್ಟ್ರ ರಾಜಧಾನಿ ದೆಹಲಿ ಚಳಿ ಬರೊಬ್ಬರಿ 119 ವರ್ಷಗಳ ದಾಖಲೆಯನ್ನು ಮುರಿದಿದ್ದು, ಈ ಕುರಿತಂತೆ ಕೇಂದ್ರ ಹವಮಾನ ಇಲಾಖೆ ಮಾಹಿತಿ ನೀಡಿದೆ. 1901ರಲ್ಲಿ ದಾಖಲಾಗಿದ್ದ ಕನಿಷ್ಛ ತಾಪಮಾನಕ್ಕಿಂತಲೂ ಇಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಹವಾಮಾನ ಇಲಾಖೆ, 1901ರಲ್ಲಿ ದೆಹಲಿಯಲ್ಲಿ ಮಧ್ಯಾಹ್ನ 02:30ರ ವೇಳೆಗೆ 9.4 ಡಿಗ್ರಿ ಯಷ್ಟು ತಾಪಮಾನ ದಾಖಲಾಗಿತ್ತು. ಆದರೆ ಇಂದು ದೆಹಲಿಯಲ್ಲಿ ಮಧ್ಯಾಹ್ನ 02:30ರ ವೇಳೆಗೆತಾಪಮಾನ 9ಡಿಗ್ರಿಗೆ ಳಿಯುವ ಮೂಲಕ ಆ 119 ವರ್ಷಗಳ ಹಳೆಯ ಶತಮಾನದ ದಾಖಲೆಯನ್ನು ಹಿಂದಿಕ್ಕಿದೆ. ಆ ಮೂಲಕ ದೆಹಲಿಯ 119 ವರ್ಷಗಳ ಇತಿಹಾಸದಲ್ಲಿಯೇ ಡಿಸೆಂಬರ್ ನ ಅತ್ಯಂತ ಚಳಿಯ ದಿನವಾಗಿದೆ. ಇನ್ನು ದೆಹಲಿಯ ಪಾಲಂನಲ್ಲಿ 9 ಡಿಗ್ರಿ ತಾಪಮಾನ ದಾಖಲಾಗಿದ್ದು, ಸಫ್ದರ್ ಜಂಗ್ ಪ್ರದೇಶದಲ್ಲಿ 9.4 ಡಿಗ್ರಿ ತಾಪಮಾನ ದಾಖಲಾಗಿದೆ.
ಈ ಹಿಂದೆ ವಾರದ ಹಿಂದಯಷ್ಟೇ ದೆಹಲಿಯಲ್ಲಿ ಕನಿಷ್ಠ ತಾಪಮಾನ 2.4 ಡಿಗ್ರಿಗೆ ಇಳಿಕೆಯಾಗಿ ದಾಖಲೆ ನಿರ್ಮಾಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


