ದೇಶ

ಇಂದಿನ ಯುವಕರು ಅರಾಜಕತೆ, ಅಸ್ಥಿರತೆ, ಜಾತಿವಾದ, ಸ್ವಜನಪಕ್ಷಪಾತಗಳನ್ನು ದ್ವೇಷಿಸುತ್ತಾರೆ: ಪ್ರಧಾನಿ ಮೋದಿ

ಮುಂದಿನ ದಿನಗಳಲ್ಲಿ ದೇಶವನ್ನು ಯುವಕರು ಆಳಲಿದ್ದಾರೆ. ಇಂದಿನ ಯುವಕರು ವ್ಯವಸ್ಥೆಯನ್ನು ನಂಬುತ್ತಾರೆ, ವ್ಯಾಪಕ ವಿಚಾರಗಳ ಬಗ್ಗೆ ಅಭಿಪ್ರಾಯವನ್ನು ಹೊಂದಿದ್ದು, ಅರಾಜಕತೆ, ಅಸ್ಥಿರತೆ, ಜಾತಿವಾದ, ಸ್ವಜನಪಕ್ಷಪಾತಗಳನ್ನು ದ್ವೇಷಿಸುತ್ತಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

ಇಂದಿನ ಯುವಕರು ಅರಾಜಕತೆ, ಅಸ್ಥಿರತೆ, ಜಾತಿವಾದ, ಸ್ವಜನಪಕ್ಷಪಾತಗಳನ್ನು ದ್ವೇಷಿಸುತ್ತಾರೆ: ಪ್ರಧಾನಿ ಮೋದಿ
ಪ್ರಧಾನಿ ಮೋದಿ
Published On :

ನವದೆಹಲಿ: ಮುಂದಿನ ದಿನಗಳಲ್ಲಿ ದೇಶವನ್ನು ಯುವಕರು ಆಳಲಿದ್ದಾರೆ. ಇಂದಿನ ಯುವಕರು ವ್ಯವಸ್ಥೆಯನ್ನು ನಂಬುತ್ತಾರೆ, ವ್ಯಾಪಕ ವಿಚಾರಗಳ ಬಗ್ಗೆ ಅಭಿಪ್ರಾಯವನ್ನು ಹೊಂದಿದ್ದು, ಅರಾಜಕತೆ, ಅಸ್ಥಿರತೆ, ಜಾತಿವಾದ, ಸ್ವಜನಪಕ್ಷಪಾತಗಳನ್ನು ದ್ವೇಷಿಸುತ್ತಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 

ಪ್ರಸಕ್ತ ಸಾಲಿನ ಕಡೆಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಅವರು, ಮುಂಬರುವ ದಶಕ ಯುವಕರಲ್ಲಿ ಅಭಿವೃದ್ಧಿಯಷ್ಟೇ ಅಲ್ಲದೆ, ಯುವಕರ ಸಾಮರ್ಥ್ಯಗಳಿಂದ ಪ್ರೇರಿತವಾದ ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ. 

ವಿವಿಧ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಶಾಲೆಗಳಲ್ಲಿ ನಾವು ವಿದ್ಯಾಭ್ಯಾಸ ಮಾಡುತ್ತೇವೆ. ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಹಳೆಯ ವಿದ್ಯಾರ್ಥಿಗಳಾಗಿ ಒಂದೊಮ್ಮೆ ಎಲ್ಲರೂ ಭೇಟಿಯಾಗುವ ಅವಕಾಶ ಸಿಗುತ್ತದೆ. ಅಂತಹ ಸಂದರ್ಭದಲ್ಲಿ ಶಾಲೆಯ ಹಳೆಯ ನೆನೆಪುಗಳನ್ನು ಸ್ಮರಿಸುತ್ತೇವೆ. ಅದೊಂದು ವಿಭಿನ್ನವಾದ ಸಂತೋಷ. ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ಜನರ ಬಳಿ ಮನವಿಯೊಂದನ್ನು ಮಾಡಿಕೊಂಡಿದ್ದೆ. ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಖರೀದಿಸುವಂತೆ ಮನವಿ ಮಾಡಿಕೊಂಡಿದ್ದೆ. 

ಇಂದು ಮತ್ತೊಮ್ಮೆ ದೇಶದ ಜನತೆ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಸ್ಥಳೀಯ ವಸ್ತು ಹಾಗೂ ಪದಾರ್ಧಗಳಿಗೆ ಪ್ರಾಮುಖ್ಯತೆ ನೀಡೋಣವೇ? ಸ್ಥಲೀಯ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿರುವ ಈ ದೇಶವಾಸಿಗಳಿಗೆ ಸಮೃದ್ಧಿಯನ್ನು ತರೋಣವೇ? 100 ವರ್ಷಗಳ ಹಿಂದೆಯೇ ಮಹಾತ್ಮ ಗಾಂಧೀಜಿಯವರು ಸ್ವದೇಶಿ ಚಳುವಳಿಯನ್ನು ನಡೆಸಿದ್ದರು. ಅದು ಅತ್ಯಂತ ದೊಡ್ಡ ಚಳುವಳಿಯಾಗಿತ್ತು. ಭಾರತೀಯ ವಸ್ತುಗಳನ್ನು ಪ್ರೋತ್ಸಾಹಿಸುವುದು ಚಳುವಳಿಯ ಪ್ರಮುಖ ಉದ್ದೇಶವಾಗಿತ್ತು. 

2022ರ ನೂತನ ವರ್ಷದಂದು ಪ್ರತಿಜ್ಞೆಯೊಂದನ್ನು ಮಾಡಬಹುದೇ? ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಲೆದಿವೆ. ಈ 2-3 ವರ್ಷಗಳು ನಾವು ಸ್ಥಳೀಯ ಹಾಗೂ ಭಾರತದ ವಸ್ತುಗಳನ್ನು ಮಾತ್ರ ಖರೀದಿಸಬೇಕೆಂದು ಪ್ರತಿಜ್ಞೆ ಮಾಡೋಣ. ದೇಶದಲ್ಲಿ ಶ್ರಮ ಪಡುತ್ತಿರುವ ಜನರಿಗೆ ಸಹಾಯ ಮಾಡೋಣ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.