ಹೆಲ್ಮೆಟ್ ಧರಿಸದೇ ಪ್ರಿಯಾಂಕಾ ಪ್ರಯಾಣ, ಸ್ಕೂಟರ್ ಮಾಲೀಕನಿಗೆ 6 ಸಾವಿರ ರೂ ದಂಡ!
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಅಪ್ತನಿಗೆ ಉತ್ತರ ಪ್ರದೇಶ ಟ್ರಾಫಿಕ್ ಪೊಲೀಸರು ಬರೊಬ್ಬರಿ 6, 100 ರೂ ದಂಡ ವಿಧಿಸಿದ್ದಾರೆ.

ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಅಪ್ತನಿಗೆ ಉತ್ತರ ಪ್ರದೇಶ ಟ್ರಾಫಿಕ್ ಪೊಲೀಸರು ಬರೊಬ್ಬರಿ 6, 100 ರೂ ದಂಡ ವಿಧಿಸಿದ್ದಾರೆ.
ಹೌದು.. ನಿನ್ನೆ ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದಾರಾಪುರಿ ಅವರನ್ನ ಭೇಟಿಯಾಗುವ ವೇಳೆ ಪ್ರಿಯಾಂಕಾ ಗಾಂಧಿ ಅವರು ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾಣಿಸಿದ್ದರು. ಹೀಗಾಗಿ ಇಂದು ಉತ್ತರ ಪ್ರದೇಶದ ಟ್ರಾಫಿಕ್ ಪೊಲೀಸರು ಸ್ಕೂಟರ್ ಮಾಲೀಕನಿಗೆ 6,100 ರೂಪಾಯಿ ದಂಡ ವಿಧಿಸಿದ್ದಾರೆ.
ಇನ್ನು ಸ್ಕೂಟರ್ ಸವಾರಿ ವೇಳೆ ಪ್ರಿಯಾಂಕಾರನ್ನು ತಡೆದಿದ್ದ ಪೊಲೀಸರು ಅವರನ್ನು ಹಿಂದಕ್ಕೆ ಹೋಗುವಂತೆ ಸೂಚಿಸಿದ್ದರು. ಆದರೆ ಪೊಲೀಸರಿಗೇ ಚಳ್ಳೇ ಹಣ್ಣು ತಿನ್ನಿಸಿದ್ದ ಪ್ರಿಯಾಂಕಾ ಕೊನೆಗೂ ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದಾರಾಪುರಿ ಅವರನ್ನ ಭೇಟಿಯಾಗಿದ್ದರು. ಅಲ್ಲದೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, 'ಮಹಿಳಾ ಪೊಲೀಸರು ತಮ್ಮ ಕುತ್ತಿಗೆ ಹಿಸುಕಿ, ನೂಕಿದ್ದರು ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನ ಫೊಲೀಸರು ಸುಳ್ಳು ಎಂದು ತಳ್ಳಿಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


