ದೇಶ

ಸ್ಪೈಸ್ ಜೆಟ್ ವಿಮಾನ ಸಿಬ್ಬಂದಿಯಿಂದ ದುರ್ವರ್ತನೆ: ಸಂಸದೆ ಪ್ರಗ್ಯಾ ಠಾಕೂರ್ ದೂರು ದಾಖಲು 

ಸ್ಪೈಸ್ ಜೆಟ್ ವಿಮಾನದಲ್ಲಿ ತಾವು ಕಾಯ್ದಿರಿಸಿದ್ದ ಸೀಟನ್ನು ನೀಡಲಿಲ್ಲ, ವಿಮಾನದ ಸಿಬ್ಬಂದಿಯ ತಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ಸ್ಪೈಸ್ ಜೆಟ್ ವಿಮಾನ ಸಿಬ್ಬಂದಿಯಿಂದ ದುರ್ವರ್ತನೆ: ಸಂಸದೆ ಪ್ರಗ್ಯಾ ಠಾಕೂರ್ ದೂರು ದಾಖಲು 
ಸಂಸದೆ ಪ್ರಗ್ಯಾ ಠಾಕೂರ್
Published On :

ಭೋಪಾಲ್(ಮಧ್ಯ ಪ್ರದೇಶ): ಸ್ಪೈಸ್ ಜೆಟ್ ವಿಮಾನದಲ್ಲಿ ತಾವು ಕಾಯ್ದಿರಿಸಿದ್ದ ಸೀಟನ್ನು ನೀಡಲಿಲ್ಲ, ವಿಮಾನದ ಸಿಬ್ಬಂದಿಯ ತಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕರಿಗೆ ದೂರು ನೀಡಿದ್ದಾರೆ.


ವಿಮಾನ ಪ್ರಯಾಣದ ವೇಳೆ ತಮಗಾದ ತೊಂದರೆ ಬಗ್ಗೆ ನಿನ್ನೆ ಅವರು ದೂರು ಸಲ್ಲಿಸಿದ್ದು, ಸ್ಪೈಸ್ ಜೆಟ್ ಸಿಬ್ಬಂದಿಯ ವರ್ತನೆ ಸರಿಯಾಗಿರಲಿಲ್ಲ, ಈ ಹಿಂದೊಮ್ಮೆ ಕೂಡ ತಮಗೆ ಈ ರೀತಿಯಾಗಿತ್ತು, ತಾವು ಕಾಯ್ದಿರಿಸಿದ ಸೀಟು ಸಿಕ್ಕಿರಲಿಲ್ಲ ಎಂದು ಪ್ರಗ್ಯಾ ಠಾಕೂರ್ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.


ವಿಮಾನ ನಿಲ್ದಾಣ ನಿರ್ದೇಶಕರ ಬಳಿ ಹೋಗಿ ಈ ಸಂಬಂಧ ಲಿಖಿತ ದೂರು ನೀಡಿದ್ದೇನೆ, ರೈಲು,ವಿಮಾನಗಳಿರುವುದು ಜನರ ಸೌಕರ್ಯಕ್ಕೆ, ಸಾರ್ವಜನಿಕ ಪ್ರತಿನಿಧಿಗಳಾಗಿ ಸಾಮಾನ್ಯ ಜನರಿಗೆ ಸಿಗಬೇಕಾದ ಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ, ಸಾಮಾನ್ಯ ಜನರಿಗೂ ಈ ರೀತಿ ಆಗಬಾರದು, ಹೀಗಾಗಿ ದೂರು ನೀಡಿದೆ ಎಂದರು.


ಈ ಸಂಬಂಧ ದೂರು ಸ್ವೀಕರಿಸಿದ್ದು ತನಿಖೆ ನಡೆಸಲಾಗುವುದು, ಸ್ಪೈಸ್ ಜೆಟ್ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗುವುದು ಎಂದು ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕ ಅನಿಲ್ ವಿಕ್ರಮ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.