ದೇಶ

ಭಾರತೀಯ ನಾಗರಿಕರು ಬ್ಯಾಂಕ್ ಖಾತೆ ತೆರೆಯಲು ಧರ್ಮ ಘೋಷಿಸುವ ಅಗತ್ಯವಿಲ್ಲ- ಹಣಕಾಸು ಸಚಿವಾಲಯ

ಭಾರತೀಯ ನಾಗರಿಕರು ಬ್ಯಾಂಕಿನ ಕೆವೈಸಿ- ಗ್ರಾಹಕರ ಗುರುತು ಹಾಗೂ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವಿಕೆಯ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಫಾರಂನಲ್ಲಿ ಧರ್ಮವನ್ನು ಘೋಷಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತೀಯ ನಾಗರಿಕರು ಬ್ಯಾಂಕ್ ಖಾತೆ ತೆರೆಯಲು ಧರ್ಮ ಘೋಷಿಸುವ ಅಗತ್ಯವಿಲ್ಲ- ಹಣಕಾಸು ಸಚಿವಾಲಯ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಭಾರತೀಯ ನಾಗರಿಕರು ಬ್ಯಾಂಕಿನ ಕೆವೈಸಿ- ಗ್ರಾಹಕರ ಗುರುತು ಹಾಗೂ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವಿಕೆಯ  (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಫಾರಂನಲ್ಲಿ ಧರ್ಮವನ್ನು ಘೋಷಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಕೆವೈಸಿ ಅಥವಾ ಬ್ಯಾಂಕ್ ಖಾತೆ ತೆರೆಯಲು, ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಗೆ ಭಾರತೀಯ ನಾಗರಿಕರು ಧರ್ಮ ಘೋಷಿಸುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯದ  ಹಣಕಾಸು ಸೇವೆ ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.

"ಬ್ಯಾಂಕುಗಳ  ಬಗ್ಗೆಗಿನ ಅಂತಹ ಆಧಾರರಹಿತ ವದಂತಿಗಳಿಗೆ ಒಳಗಾಗಬೇಡಿ ಎಂದು ಅವರು ಹೇಳಿದ್ದಾರೆ. 

ಅನಿವಾಸಿ ಭಾರತೀಯ ಸಾಮಾನ್ಯ ರೂಪಾಯಿ ಖಾತೆಗಳು ( ಎನ್. ಆರ್. ಓ) ಖಾತೆ ತೆರೆಯುವಾಗ  ಫೆಮಾ ಕಾಯ್ದೆಯ ನಿಯಮಗಳಲ್ಲಿನ ಬದಲಾವಣೆಗನುಗುಣವಾಗಿ  ಗ್ರಾಹಕರು ಮತ್ತು ಠೇವಣಿದಾರರು ಕೆವೈಸಿ ಫಾರಂನಲ್ಲಿ ಧರ್ಮದ ವಿವರಗಳನ್ನು ಬ್ಯಾಂಕ್ ಗಳ ಶೀಘ್ರದಲ್ಲಿಯೇ ಪಡೆಯಬಹುದು ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಈ ಸ್ಪಷ್ಟೀಕರಣ ನೀಡಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.