ದೇಶ

ನಿಮ್ಮ ಹಿಂದುತ್ವ ಶಾಲೆಯ ಹೆಡ್ ಮಾಸ್ಟರ್ ನಾವು: ಬಿಜೆಪಿಗೆ ಶಿವಸೇನೆ ತಿರುಗೇಟು 

ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿರುವ ಶಿವಸೇನೆ ತನಗೆ ಎಷ್ಟು ದೇಶಭಕ್ತಿ ಇದೆ, ಹಿಂದುತ್ವದ ಬದ್ಧತೆ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುವ ಅವಶ್ಯಕತೆ ಇಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದೆ.

ನಿಮ್ಮ ಹಿಂದುತ್ವ ಶಾಲೆಯ ಹೆಡ್ ಮಾಸ್ಟರ್ ನಾವು: ಬಿಜೆಪಿಗೆ ಶಿವಸೇನೆ ತಿರುಗೇಟು 
ನಿಮ್ಮ ಹಿಂದುತ್ವ ಶಾಲೆಯ ಹೆಡ್ ಮಾಸ್ಟರ್ ನಾವು: ಬಿಜೆಪಿಗೆ ಶಿವಸೇನೆ ತಿರುಗೇಟು
Published On :

ನವದೆಹಲಿ: ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿರುವ ಶಿವಸೇನೆ ತನಗೆ ಎಷ್ಟು ದೇಶಭಕ್ತಿ ಇದೆ, ಹಿಂದುತ್ವದ ಬದ್ಧತೆ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುವ ಅವಶ್ಯಕತೆ ಇಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದೆ. 

ಬಿಜೆಪಿ ನಾಯಕರು ಹಾಜರಾಗುವ ಹಿಂದುತ್ವ ಶಾಲೆಯ ಹೆಡ್ ಮಾಸ್ಟರ್ ಎಂದು ಶಿವಸೇನೆ ತನ್ನನ್ನು ತಾನು ಹೇಳಿದೆ. 

ಮಸೂದೆಯನ್ನು ಬೆಂಬಲಿಸದೇ ಇರುವವರು ದೇಶವಿರೋಧಿಗಳು, ಪಾಕಿಸ್ತಾನದ ಭಾಷೆಯಲ್ಲೇ ಮಾತನಾಡುತ್ತಿದ್ದಾರೆ ಎಂಬ ಹೇಳಿಕೆ ಕೇಳಿಬರುತ್ತಿದೆ. 

ಹಿಂದುತ್ವ ಹಾಗೂ ದೇಶಭಕ್ತಿಯನ್ನು ಸಾಬೀತುಪಡಿಸುವುದಕ್ಕೆ ನಮಗೆ ಪ್ರಮಾಣ ಪತ್ರ ಬೇಕಿಲ್ಲ. ಬಿಜೆಪಿ ನಾಯಕರು ಕಲಿಯುವ ಹಿಂದುತ್ವದ ಹೆಡ್ ಮಾಸ್ಟರ್ ಶಿವಸೇನೆ, ಬಾಳ್ ಠಾಕ್ರೆ, ಅಟಲ್ ಬಿಹಾರಿ ವಾಜಪೇಯಿ, ಶ್ಯಾಮ ಪ್ರಸಾದ್ ಮುಖರ್ಜಿ ಅವರೆಲ್ಲರೂ ನಮ್ಮ ಶಾಲೆಯ ಹೆಡ್ ಮಾಸ್ಟರ್ ಗಳು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.