ಸೇಲಂನ ಈ ಕಳ್ಳನಿಗೆ ಕದಿಯುವುದು ಚಟವಂತೆ, ಕಳ್ಳತನ ಮಾಡದಿದ್ದರೆ ರಾತ್ರಿ ನಿದ್ದೆಯೇ ಬರುವುದಿಲ್ಲವಂತೆ!
ತಾನು ಕಳ್ಳತನ, ದರೋಡೆ ಚಟಕ್ಕೆ ಬಲಿಯಾಗಿದ್ದೇನೆ ಎಂದು ದರೋಡೆಕೋರನೊಬ್ಬ ಸೇಲಂ ನಗರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಸೇಲಂ: ತಾನು ಕಳ್ಳತನ, ದರೋಡೆ ಚಟಕ್ಕೆ ಬಲಿಯಾಗಿದ್ದೇನೆ ಎಂದು ದರೋಡೆಕೋರನೊಬ್ಬ ಸೇಲಂ ನಗರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ತನಿಖೆ ವೇಳೆ ಪೊಲೀಸರ ಮುಂದೆ ಆರೋಪಿ ಅಯ್ಯದೊರೈ ಅಲಿಯಾಸ್ ಸಪ್ಪಾಣಿ ಕಳ್ಳತನ ಮಾಡದಿದ್ದರೆ ತನಗೆ ರಾತ್ರಿ ಸರಿಯಾಗಿ ನಿದ್ದೆಯೇ ಬರುವುದಿಲ್ಲ ಎಂದು ಹೇಳಿದ್ದಾನೆ.
40 ದಿನಗಳ ಹಿಂದೆ ಈತನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು, ಅಂದಿನಿಂದ ಇಲ್ಲಿಯವರೆಗೆ 27 ದರೋಡೆಗಳನ್ನು ಮಾಡಿದ್ದಾನೆ ಎಂದು ಸುರಮಂಗಲಂ ಪೊಲೀಸರು ಹೇಳುತ್ತಾರೆ.
ಈತನ ವಿರುದ್ಧ ಸುರಮಂಗಲಂ, ಪಲ್ಲಪಟ್ಟಿ, ಮೆಚಿರಿ,ಒಮಲೂರು ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ದರೋಡೆಕೋರರನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಟಿ ಸೆಂತಿಲ್ ಕುಮಾರ್ ತಿಳಿಸಿದ್ದಾರೆ.
ಅಯ್ಯದೊರೈ ಸೇಲಂನ ಒಮಲೂರಿನ ಪಾಗಲ್ಪಟ್ಟಿ ಬಳಿ ಚೆಲ್ಲಕುಟ್ಟೈಪಟ್ಟಿಯ ನಿವಾಸಿಯಾಗಿದ್ದು ಕಂಡಂಪಟ್ಟಿ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.ತನಿಖೆ ವೇಳೆ ಕಳೆದ 2 ತಿಂಗಳಲ್ಲಿ 17ಕ್ಕೂ ಹೆಚ್ಚು ಕಳ್ಳತನ ಮಾಡಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ.
ಈತ 1990ರ ದಶಕದಿಂದ ಕಳ್ಳತನ, ದರೋಡೆ ಮಾಡಲು ಆರಂಭಿಸಿದ್ದ. ಕಳೆದೆರಡು ದಶಕಗಳಲ್ಲಿ 30ಕ್ಕೂ ಅಧಿಕ ಕಳ್ಳತನ, ದರೋಡೆ ಕೇಸುಗಳು ಈತನ ವಿರುದ್ಧ ದಾಖಲಾಗಿವೆ. ಕೊಯಂಬತ್ತೂರಿನ ಕೇಂದ್ರ ಕಾರಾಗೃಹದಲ್ಲಿ ಈತನನ್ನು ಬಂಧಿಸಿ ಇಡಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಕಳ್ಳತನ ತನಗೆ ಅಭ್ಯಾಸವಾಗಿ ಹೋಗಿದ್ದು ಮನೆಗಳ ಬಾಗಿಲು ಒಡೆದು ಚಿನ್ನ-ಬೆಳ್ಳಿ ಕದಿಯುವುದು ಸಾಮಾನ್ಯವಾಗಿ ಹೋಗಿದೆಯಂತೆ. ಕಳ್ಳತನ ಮಾಡದಿದ್ದರೆ ನಿದ್ದೆಯೇ ಬರುವುದಿಲ್ಲ ಎನ್ನುತ್ತಾನೆ.
ಕಳ್ಳತನ ಮಾಡಲು ಉದ್ದೇಶಿಸುವ ಪ್ರದೇಶವನ್ನು ನೋಡಿಕೊಂಡು ಅಲ್ಲಿನ ಬೀದಿ ನಾಯಿಗಳಿಗೆ ತಿನ್ನಲು ಬಿಸ್ಕೆಟ್, ಮಾಂಸ ಹಾಕಿ ಅವು ಬೊಗಳದಂತೆ ಕಳ್ಳತನ ಮಾಡಲು ಹೋಗುವಾಗ ಹಿಂದಿನಿಂದ ಬರದಂತೆ ಮಾಡುತ್ತಾನೆ ಎಂದು ಪೊಲೀಸರು ಆತನ ಕಳ್ಳತನದ ಶೈಲಿಯನ್ನು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


