'ಹತ್ಯಾಚಾರ': ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ, ಪ್ರವಾಸಿ ತಾಣವಾದ ಎನ್ ಕೌಂಟರ್ ಸ್ಥಳ!
ಪಶು ವೈದ್ಯೆ ಹತ್ಯಾಚಾರ ಮಾಡಿದ ಕಾಮುಕ ರಾಕ್ಷಸರನ್ನು ಪೊಲೀಸರು ಬೇಟೆಯಾಡಿದ ಸ್ಥಳ ಕೂಡ ಇದೀಗ ದಿಢೀರ್ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಸಾವಿರಾರು ಮಂದಿ ತಂಡೋತಂಡವಾಗಿ ದೌಡಾಯಿಸುತ್ತಿದ್ದಾರೆ.

ಹೈದರಾಬಾದ್: ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಹತ್ಯಾಚಾರ ಆರೋಪಿಗಳ ಎನ್ಕೌಂಟರ್ ಸುದ್ದಿ ಇದೀಗ ಕಾಡ್ಗಿಚ್ಚಿನಂತೆ ದೇಶಾದ್ಯಂತ ಹಬ್ಬಿದ್ದು, ತೆಲಂಗಾಣ ಪೊಲೀಸರ ಕಾರ್ಯಕ್ಕೆ ಎಲ್ಲಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಂತೆಯೇ ಕಾಮುಕ ರಾಕ್ಷಸರನ್ನು ಪೊಲೀಸರು ಬೇಟೆಯಾಡಿದ ಸ್ಥಳ ಕೂಡ ಇದೀಗ ದಿಢೀರ್ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಸಾವಿರಾರು ಮಂದಿ ತಂಡೋತಂಡವಾಗಿ ದೌಡಾಯಿಸುತ್ತಿದ್ದಾರೆ.
ಹೌದು.. ಇಂದು ಮುಂಜಾನೆ ಹತ್ಯಾಚಾರಿಗಳ ಎನ್ಕೌಂಟರ್ ನಡೆದ ಸ್ಥಳ ಇದೀಗ ದಿಢೀರ್ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಎನ್ಕೌಂಟರ್ ವಿಚಾರ ತಿಳಿದ ಕೂಡ ಹೈದರಾಬಾದ್ ಜನತೆ ಎನ್ಕೌಂಟರ್ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಬಸ್, ಕಾರು, ಬೈಕ್ ಹೀಗೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಘಟನಾ ಸ್ಥಳಕ್ಕೆ ಜನರು ದೌಡಾಯಿಸುತ್ತಿದ್ದು, ಒಂದೆಡೆ ಪ್ರಿಯಾಂಕಾ ರೆಡ್ಡಿಯನ್ನು ಸುಟ್ಟುಹಾಕಿದ ಸ್ಥಳಕ್ಕೆ ಹೂಗಳನ್ನು ಅರ್ಪಿಸಿ ಬಳಿಕ ಎನ್ ಕೌಂಟರ್ ನಡೆದ ಸ್ಥಳಕ್ಕೆ ತೆರಳುತ್ತಿದ್ದಾರೆ.
ಇನ್ನು ಅದೇ ಮಾರ್ಗದಲ್ಲಿ ಚಲಿಸುತ್ತಿರುವ ವಾಹನಗಳಲ್ಲಿನ ಪ್ರಯಾಣಿಕರು ಅಲ್ಲಿಯೇ ಇದ್ದ ಪೊಲೀಸರಿಗೆ ಜೋರಾಗಿ ಕೂಗುತ್ತಾ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಇನ್ನು ಬಸ್ಸಿನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಯುವತಿಯರೂ ಕೂಡ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಥ್ಯಾಂಕ್ಯೂ ತೆಲಂಗಾಣ ಪೊಲೀಸ್ ಎಂದು ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ.


Related Article
ಹೈದರಾಬಾದ್ ಅತ್ಯಾಚಾರಿಗಳ ಬೇಟೆ: ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಪೂರ್ವಯೋಜಿತವಲ್ಲ, ಪೊಲೀಸರ ಆತ್ಮರಕ್ಷಣೆಗಾಗಿ ಎನ್ಕೌಂಟರ್: ಡಿಸಿಪಿ ಪ್ರಕಾಶ್ ರೆಡ್ಡಿ!
ಹೈದರಾಬಾದ್: ನರರಾಕ್ಷಸರನ್ನು ಬೇಟೆಯಾಡಿದ್ದು ಕರ್ನಾಟಕದ ಸಿಂಗಂ!
ಪಾಪಿಗಳಿಗೆ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ: ಎನ್ಕೌಂಟರ್ ಕುರಿತು ಪ್ರಿಯಾಂಕಾ ಪೋಷಕರು
ಪ್ರಿಯಾಂಕಾ ರೆಡ್ಡಿ 'ಹತ್ಯಾಚಾರ': ಎಲ್ಲಾ ಆರೋಪಿಗಳು ಎನ್'ಕೌಂಟರ್ ನಲ್ಲಿ ಹತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


