ದೇಶ

ಪಾಪಿಗಳಿಗೆ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ: ಎನ್ಕೌಂಟರ್ ಕುರಿತು ಪ್ರಿಯಾಂಕಾ ಪೋಷಕರು

ತಮ್ಮ ಮಗಳನ್ನು ಹರಿದು ಮುಕ್ಕಿದ ಪಾಪಿಗಳಗೇ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ ಎಂದು ಹೈದರಾಬಾದ್ ಪಶು ವೈದ್ಯೆ ಪ್ರಿಯಾಂಕಾರೆಡ್ಡಿ ಪೋಷಕರು ಹೇಳಿದ್ದಾರೆ.

ಪಾಪಿಗಳಿಗೆ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ: ಎನ್ಕೌಂಟರ್ ಕುರಿತು ಪ್ರಿಯಾಂಕಾ ಪೋಷಕರು
ಸಂಗ್ರಹ ಚಿತ್ರ
Published On :

ಹೈದರಾಬಾದ್: ತಮ್ಮ ಮಗಳನ್ನು ಹರಿದು ಮುಕ್ಕಿದ ಪಾಪಿಗಳಗೇ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ ಎಂದು ಹೈದರಾಬಾದ್ ಪಶು ವೈದ್ಯೆ ಪ್ರಿಯಾಂಕಾರೆಡ್ಡಿ ಪೋಷಕರು ಹೇಳಿದ್ದಾರೆ.

ಪ್ರಿಯಾಂಕಾರೆಡ್ಡಿ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ಸುದ್ದಿ ಇದೀಗ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಪೊಲೀಸರ ಕಾರ್ಯಕ್ಕೆ ಎಲ್ಲಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಇನ್ನು ಪೊಲೀಸರ ಕಾರ್ಯಕ್ಕೆ ಪ್ರಿಯಾಂಕಾ ರೆಡ್ಡಿ ಪೋಷಕರು ಕೂಡ ಹರ್ಷ ವ್ಯಕ್ತಪಡಿಸಿದ್ದು. ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾರೆಡ್ಡಿ ತಾಯಿ, ತಮ್ಮ ಮಗಳನ್ನು ಹರಿದು ಮುಕ್ಕಿದ ಪಾಪಿಗಳಗೇ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ. ಆ ದೇವರೇ ಪಾಪಿಗಳಿಗೆ ಶಿಕ್ಷೆ ನೀಡುವ ಮೂಲಕ ನನ್ನ ಮಗಳಿಗೆ ನ್ಯಾಯ ಕೊಡಿಸಿದ್ದಾನೆ ಎಂದು ಹೇಳಿದ್ದಾರೆ.

ಅಂತೆಯೇ ಪೊಲೀಸರ ಕಾರ್ಯವನ್ನು ಶ್ಲಾಘಿಸಿರುವ ನಿರ್ಭಯಾ ತಾಯಿ ಆಶಾದೇವಿ ಅವರು, ಪೊಲೀಸರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಎನ್ ಕೌಂಟರ್ ಮಾಡಿರುವ ಪೊಲೀಸರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.