ಪಶುವೈದ್ಯೆ ಅತ್ಯಾಚಾರಿಗಳಿಗೆ ತೆಲಂಗಾಣ ಜೈಲಿನಲ್ಲಿ ವಿಶೇಷ ಆತಿಥ್ಯ, ಮಟನ್ ಕರಿ ಭೋಜನ!
ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಅತ್ಯಾಚಾರಗೈದು ಶವವನ್ನು ಸುಟ್ಟುಹಾಕಿದ್ದ ನರರಾಕ್ಷಸರನ್ನು ಶಿಕ್ಷಿಸಲು ತಮಗೊಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಆದರೆ ಜೈಲಿನಲ್ಲಿ ಸುರಕ್ಷಿತವಾಗಿರುವ ಅತ್ಯಾಚಾರಿಗಳಿಗೆ ಮಾತ್ರ ರಾಜಾತಿಥ್ಯ ದೊರೆಯುತ್ತಿದೆ.

ತೆಲಂಗಾಣ: ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಅತ್ಯಾಚಾರಗೈದು ಶವವನ್ನು ಸುಟ್ಟುಹಾಕಿದ್ದ ನರರಾಕ್ಷಸರನ್ನು ಶಿಕ್ಷಿಸಲು ತಮಗೊಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಆದರೆ ಜೈಲಿನಲ್ಲಿ ಸುರಕ್ಷಿತವಾಗಿರುವ ಅತ್ಯಾಚಾರಿಗಳಿಗೆ ಮಾತ್ರ ರಾಜಾತಿಥ್ಯ ದೊರೆಯುತ್ತಿದೆ.
ತೆಲಂಗಾಣದ ಜೈಲಿನಲ್ಲಿ ಬಿಗಿ ಭದ್ರತೆಯಲ್ಲಿರುವ ನಾಲ್ವರು ಅತ್ಯಾಚಾರಿಗಳಿಗೆ ಭೂರಿ ಭೋಜನ ಪೂರೈಕೆ ಮಾಡಲಾಗಿದೆ. ಅತ್ಯಾಚಾರಿಗಳಿಗೆ ದಾಲ್ ರೈಸ್ ನೀಡಲಾಗಿದ್ದು, ಮಟನ್ ಕರಿಯನ್ನು ಉಣಬಡಿಸಲಾಗಿದೆ.
ಈ ನಡುವೆ ಅತ್ಯಾಚಾರ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ 3 ಪೊಲೀಸ್ ಅಧಿಕಾರಿಗಳನ್ನು ನಿರ್ಲಕ್ಷ್ಯಕ್ಕಾಗಿ ಅಮಾನತು ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


