ದೇಶ

ಭಾರತೀಯರು ಹೊರಕ್ಕೆ, ವಿದೇಶಿಗರು ಒಳಕ್ಕೆ: ಎನ್ ಆರ್ ಸಿ ಬಗ್ಗೆ ತರುಣ್ ಗೊಗೋಯ್

ಆ.31 ರಂದು ಪ್ರಕಟವಾಗಿರುವ ಎನ್ ಆರ್ ಸಿ ಪಟ್ಟಿಯ ಬಗ್ಗೆ ಅಸ್ಸಾಂ ನ ಮಾಜಿ ಸಿಎಂ ತರುಣ್ ಗೊಗೋಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯರು ಹೊರಕ್ಕೆ, ವಿದೇಶಿಗರು ಒಳಕ್ಕೆ: ಎನ್ ಆರ್ ಸಿ ಬಗ್ಗೆ ತರುಣ್ ಗೊಗೋಯ್
ತರುಣ್ ಗೊಗೋಯ್
Published On :

ಆ.31 ರಂದು ಪ್ರಕಟವಾಗಿರುವ ಎನ್ ಆರ್ ಸಿ ಪಟ್ಟಿಯ ಬಗ್ಗೆ ಅಸ್ಸಾಂ ನ ಮಾಜಿ ಸಿಎಂ ತರುಣ್ ಗೊಗೋಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅಧಿಕಾರಿಗಳು ಲಕ್ಷಾಂತರ ಭಾರತೀಯರನ್ನು ಎನ್ ಆರ್ ಸಿ ಪಟ್ಟಿಯಿಂದ ಹೊರಗಿಟ್ಟಿದ್ದಾರೆ ಎಂದು ಆರೋಪಿಸಿರುವ ತರುಣ್ ಗೊಗೋಯ್ ಭಾರತೀಯರನ್ನು ಹೊರಕ್ಕೆ ಹಾಕಿ, ವಿದೇಶಿಗರನ್ನು ಒಳಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ. 

ನೈಜ ಭಾರತೀಯರನ್ನು ಪಟ್ಟಿಯಿಂದ ಹೊರಗಿಡಲಾಗಿದೆ, ಪ್ರಮುಖವಾಗಿ ಬಂಗಾಳಿ ಹಿಂದೂಗಳನ್ನು ಹೊರಗಿಡಲಾಗಿದೆ. ಹಲವು ವಿದೇಶಿಗರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ. ಎನ್ ಆರ್ ಸಿಯಲ್ಲಿ ಏನು ತಪ್ಪಾಗಿದೆ ಎಂಬುದನ್ನು ಬಿಜೆಪಿ ವಿವರಿಸಬೇಕೆಂದು ಎನ್ ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತರುಣ್ ಗೊಗೋಯ್ ಹೇಳಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.