ದೇಶ

ಪ್ರೀತಿಸಿ ಮದುವೆಯಾಗಿ ನಂತರ ನಾದಿನಿ ಮೇಲೆ ಕಣ್ಣಾಕಿದ ಭಾವ, ಬೇಡ ಬೇಡ ಅಂದ್ರೂ ಕಾಮಿಸಿದ ಪಾಪಿ!

ಅಕ್ಕನನ್ನು ಪ್ರೀತಿಸಿ ಮದುವೆಯಾಗಿದ್ದ ಭಾವ ಒಂದು ದಿನ ತನ್ನನ್ನು ಕಾಮಿಸುತ್ತಾನೆ ಎಂದು ನಾದಿನಿ ಭಾವಿಸಿರಲಿಲ್ಲ. ಬೇಡ ಬೇಡ ಅಂದರೂ ಹಿಂದೆ ಬಿದ್ದು ಸತಾಯಿಸುತ್ತಿದ್ದ ಭಾವನನ್ನು ಪರಿಪರಿಯಾಗಿ ಬೇಡಿಕೊಂಡರು ಮನಸ್ಸು ಕರಗದೆ ಹೋಗಿದ್ದರಿಂದ ಯುವತಿ ಕೊನೆಗೆ ತನ್ನ ಬಾಳನ್ನೇ ಅಂತ್ಯಗೊಳಿಸಿಕೊಂಡಿದ್ದಾಳೆ.

ಪ್ರೀತಿಸಿ ಮದುವೆಯಾಗಿ ನಂತರ ನಾದಿನಿ ಮೇಲೆ ಕಣ್ಣಾಕಿದ ಭಾವ, ಬೇಡ ಬೇಡ ಅಂದ್ರೂ ಕಾಮಿಸಿದ ಪಾಪಿ!
ಸಂಗ್ರಹ ಚಿತ್ರ
Published On :

ಓಂಗೋಲ್​: ಅಕ್ಕನನ್ನು ಪ್ರೀತಿಸಿ ಮದುವೆಯಾಗಿದ್ದ ಭಾವ ಒಂದು ದಿನ ತನ್ನನ್ನು ಕಾಮಿಸುತ್ತಾನೆ ಎಂದು ನಾದಿನಿ ಭಾವಿಸಿರಲಿಲ್ಲ. ಬೇಡ ಬೇಡ ಅಂದರೂ ಹಿಂದೆ ಬಿದ್ದು ಸತಾಯಿಸುತ್ತಿದ್ದ ಭಾವನನ್ನು ಪರಿಪರಿಯಾಗಿ ಬೇಡಿಕೊಂಡರು ಮನಸ್ಸು ಕರಗದೆ ಹೋಗಿದ್ದರಿಂದ ಯುವತಿ ಕೊನೆಗೆ ತನ್ನ ಬಾಳನ್ನೇ ಅಂತ್ಯಗೊಳಿಸಿಕೊಂಡಿದ್ದಾಳೆ. 

ಆಂದ್ರ ಪ್ರದೇಶದ ಓಂಗೋಲ್ ನ ಕುಮ್ಮರಿಪಲಂನ ವೇಣುಗೋಲಸ್ವಾಮಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಮೌನಿಕಾ ಎಂಬಾಕೆ ಭಾವನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ನತದೃಷ್ಟ ಯುವತಿ. ಮೌನಿಕಾ ತಂದೆ ನಾಗೇಂದ್ರ ಅವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದರು. 

ಮೊದಲಿಗೆ ಸುಧಾಕರ್ ಬಾಬು ನಾಗೇಂದ್ರ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್ ನಾಗೇಂದ್ರ ಅವರ ಎರಡನೇ ಮಗಳು ಮಾಧವಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ತಿಳಿದ ನಾಗೇಂದ್ರ ಅವರು ಇಬ್ಬರಿಗೂ ಮದುವೆ ಮಾಡಿಸಿದ್ದರು. 

ಈ ದಂಪತಿಗೆ ಇಬ್ಬರು ಮಕ್ಕಳಾದರು. ಆ ಮೇಲೆ ತನ್ನ ವರಸೆ ತೋರಿಸಿದ ಸುಧಾಕರ್ ನಾದಿನಿ ಮೌನಿಕಾ ಮೇಲೆ ಕಣ್ಣು ಹಾಕಿದ. ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದಕ್ಕೆ ಒಪ್ಪದಾಗ ಆಕೆಗೆ ಬರುತ್ತಿದ್ದ ಮದುವೆ ಸಂಬಂಧಗಳನ್ನು ಕೆಡಿಸುತ್ತಿದ್ದ. ಇದರಿಂದ ರೋಸಿಹೋದ ಮೌನಿಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಇನ್ನು ತಂಗಿಯ ಸಾವಿನಿಂದ ಬೇಸತ್ತ ಮಾಧವಿ ಪೊಲೀಸರಿಗೆ ದೂರು ನೀಡಿದ್ದು ತಮ್ಮ ಪತಿಯ ಕಿರುಕುಳದಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.