ದೇಶ

ರಾಷ್ಟ್ರ ವಿರೋಧಿ ಹಣ ವರ್ಗಾವಣೆ ಪಿತೂರಿ ಬಹಿರಂಗಪಡಿಸಲು ಚಿದಂಬರಂ ಕಸ್ಟಡಿ ಅಗತ್ಯವಿದೆ- ಸುಪ್ರೀಂಗೆ ಇಡಿ 

ರಾಷ್ಟ್ರ ಹಾಗೂ ಸಮಾಜಕ್ಕೆ ವಿರುದ್ದವಾಗಿರುವ ಹಣ ವರ್ಗಾವಣೆ ಅಪರಾಧವಾಗಿದೆ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಗೆ ಇಂದು ತಿಳಿಸಿದೆ.

ರಾಷ್ಟ್ರ ವಿರೋಧಿ ಹಣ ವರ್ಗಾವಣೆ ಪಿತೂರಿ ಬಹಿರಂಗಪಡಿಸಲು ಚಿದಂಬರಂ ಕಸ್ಟಡಿ ಅಗತ್ಯವಿದೆ- ಸುಪ್ರೀಂಗೆ ಇಡಿ 
ಪಿ. ಚಿದಂಬರಂ
Published On :

ನವದೆಹಲಿ: ರಾಷ್ಟ್ರ ಹಾಗೂ ಸಮಾಜಕ್ಕೆ ವಿರುದ್ದವಾಗಿರುವ ಹಣ ವರ್ಗಾವಣೆ ಅಪರಾಧವಾಗಿದೆ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಗೆ ಇಂದು ತಿಳಿಸಿದೆ.

ಐಎನ್ ಎಕ್ಸ್ ಮಾಧ್ಯಮ ಹಣ ಹಗರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಪಿತೂರಿಯನ್ನು ಬಹಿರಂಗಪಡಿಸಲು ಅವರ ಕಸ್ಟಡಿ ಅಗತ್ಯವಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ.

ಹಣ ವರ್ಗಾವಣೆಗೆ ಸಂಬಂಧಿಸಿದ ಪುರಾವೆಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಈ ಹಂತದಲ್ಲಿ ಚಿದಂಬರಂ ಅವರ ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ವಸ್ತುಗಳನ್ನು  ತೋರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರಾದ ಆರ್ ಭಾನುಮತಿ ಮತ್ತು ಎಎಸ್ ಬೊಪ್ಪಣ್ಣ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಮುಂದೆ ಜಾರಿ ನಿರ್ದೇಶನಾಲಯ ಹೇಳಿದೆ.

ಇಡಿ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಂಗ್ರಹಿಸಿದ ವಸ್ತುಗಳನ್ನು ತೋರಿಸಲು ಸಾಧ್ಯವಿಲ್ಲ. ಬಂಧನ ಪೂರ್ವ ಜಾಮೀನು ಹಂತದಲ್ಲಿ ಸಾಕ್ಷ್ಯಧಾರಗಳು, ಮೂಲಗಳನ್ನು ತೋರಿಸಲು ಸಾಧ್ಯವಿಲ್ಲ. ವಿಚಾರಣೆಯೇ  ತನಿಖಾ ತಂಡದ ಪ್ರಮುಖ ಆಧಾರವಾಗಲಿದೆ ಎಂದು ಹೇಳಿದರು.

ಹಣ ವರ್ಗಾವಣೆ ಸಮಾಜಹಾಗೂ ರಾಷ್ಟ್ರ ವಿರೋಧಿಯಾಗಿದ್ದು, ಚಿದಂಬರಂ ಅವರಿಗೆ  ನಿರೀಕ್ಷಿತ ಜಾಮೀನು ನೀಡದೆ ಇಡಿ ಕಸ್ಟಡಿಗೆ ವಹಿಸಬೇಕೆಂದು ಮನವಿ ಮಾಡಿಕೊಂಡರು.  

ಐಎನ್ ಎಕ್ಸ್  ಮಾಧ್ಯಮ ಹಗರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಿತ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಿ. ಚಿದಂಬರಂ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.