ಹೆತ್ತವರಿಂದ ಮಕ್ಕಳ ಸಮಾನ ಪೋಷಣೆಗಾಗಿ ಸುಪ್ರೀಂಗೆ ಅರ್ಜಿ
ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ಪೋಷಕರಿಗೆ ಸಮಾನ ಪಾಲನೆ, ಜಂಟಿ ಹೊಣೆಗಾರಿಕೆಯನ್ನು ಅನುಷ್ಠಾನಗೊಳಿಸಬೇಕೆಂದು ಹಾಗೂ ಪೋಷಕರ ವಿಚ್ಛೇದನ ಪ್ರಕರಣಗಳಲ್ಲಿ ಸಿಲುಕಿರುವ ಮಕ್ಕಳ ಬಗ್ಗೆ ನ್ಯಾಯಾಲಯಗಳು ತಮ್ಮ ದೃಷ್ಟಿಕೋನ ಬದಲಿಸುವಂತೆ ‘ಸೇವ್ ಚೈಲ್ಡ್ ಇಂಡಿಯಾ ಫೌಂಡೇಷನ್’ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದೆ

ಬೆಂಗಳೂರು: ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ಪೋಷಕರಿಗೆ ಸಮಾನ ಪಾಲನೆ, ಜಂಟಿ ಹೊಣೆಗಾರಿಕೆಯನ್ನು ಅನುಷ್ಠಾನಗೊಳಿಸಬೇಕೆಂದು ಹಾಗೂ ಪೋಷಕರ ವಿಚ್ಛೇದನ ಪ್ರಕರಣಗಳಲ್ಲಿ ಸಿಲುಕಿರುವ ಮಕ್ಕಳ ಬಗ್ಗೆ ನ್ಯಾಯಾಲಯಗಳು ತಮ್ಮ ದೃಷ್ಟಿಕೋನ ಬದಲಿಸುವಂತೆ ‘ಸೇವ್ ಚೈಲ್ಡ್ ಇಂಡಿಯಾ ಫೌಂಡೇಷನ್’ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದೆ
ಶನಿವಾರ ಸುದ್ದಿಗೋಷ್ಠಿಯಲ್ಲಿ ಪೌಂಡೇಷನ್ ಸದಸ್ಯ ಹಾಗೂ ನ್ಯಾಯವಾದಿ ಪ್ರದೀಪ್ಕುಮಾರ್ ಕೌಶಿಕ್ ಮಾತನಾಡಿ, ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಳೆದ ಜುಲೈ 19ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ರಿಟ್ ಅರ್ಜಿಯು ಒಂದು ‘ನೋಬಲ್ ಕಾಸ್ ಎಂದು ಹೇಳಿದ್ದು, ಜತೆಗೆ ಪ್ರತಿವಾದಿಗಳಿಗೆ ನೋಟಿಸ್ ನೀಡುವಂತೆ ತಿಳಿಸಿದೆ ಎಂದರು.
ದೇಶದಲ್ಲಿ ಶೇ, 16 ವಿಚ್ಚೇದನ ಪ್ರಕರಣಗಳಿದ್ದು ಅದರಲ್ಲಿ ಸಿಲುಕಿರುವ ಮಕ್ಕಳ ಅಳಲು ಸಮಾಜ ಹಾಗೂ ನ್ಯಾಯಾಲಯಗಳ ಗಮನಕ್ಕೆ ಬಂದಿಲ್ಲ.ಕೌಟುಂಬಿಕ ವಿವಾದದಿಂದ ತಂದೆ ಇಲ್ಲದೆ ತಾಯಿಯ ಜತೆಗಷ್ಟೇ ಮಕ್ಕಳು ಬೆಳೆಯುವುದರಿಂದ ಮಕ್ಕಳ ಬಾಲ್ಯ, ವಾತ್ಸಲ್ಯ, ಪಾಲನೆ ಕಸಿದುಕೊಂಡಂತಾಗುತ್ತದೆ.ಅದಕ್ಕಾಗಿ ಮಕ್ಕಳ ಬೆಳವಣಿಗೆ, ಪೋಷಣೆಯಲ್ಲಿ ಪೋಷಕರು ಸಮಾನ ಪಾತ್ರವಹಿಸುವಂತೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.
ವಿವಾಹದ ವಿವಾದದಲ್ಲಿ ಮಗುವನ್ನು ಒಬ್ಬರಿಗೆ ಸೀಮಿತವಾಗಿಸಬಾರದು ಇದಕ್ಕಾಗಿಪೋಷಕರ ನಡುವೆ ಪಾಲನೆ ಬಗೆಗೆ ಒಪ್ಪಂದವಾಗಬೇಕು.ಇದಕ್ಕೆ ಸುಪ್ರೀಂ ನಿಂದ ಸಕಾರಾತ್ಮಕ ಸ್ಪಂದನೆ ಇದೆ ಎಂದು ಹೇಳಿದ ಅವರು ಸಮಾಜದಲ್ಲಿ ಈ ಸಂಬಂಧ ಜಾಗೃತಿ ಮೂಡುವ ಅಗತ್ಯವನ್ನು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


