'ಪ್ರವಾಹದ ಫೋಟೋ ನೋಡಿದಾಗ ಇದು ನನ್ನ ಪತ್ನಿಯ ಅಥವಾ ನನ್ನ ಮಗಳ ಜೊತೆಯೂ ಸಂಭವಿಸಬಹುದು ಎನಿಸಿತು'
ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಅಸ್ಸಾಂ ಪ್ರವಾಹಕ್ಕೆ 2 ಕೋಟಿ ರೂ. ಸಹಾಯಧನ ನೀಡಿದ್ದಾರೆ, ಈ ಸಂಬಂಧ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಮನ ಕರಗುವ ಉತ್ತರ ನೀಡಿದ್ದಾರೆ.

ಮುಂಬಯಿ: ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಅಸ್ಸಾಂ ಪ್ರವಾಹಕ್ಕೆ 2 ಕೋಟಿ ರೂ. ಸಹಾಯಧನ ನೀಡಿದ್ದಾರೆ, ಈ ಸಂಬಂಧ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಮನ ಕರಗುವ ಉತ್ತರ ನೀಡಿದ್ದಾರೆ.ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಅಸ್ಸಾಂಗೆ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂ.ಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದ್ದಾಗ, “ದೇವರು ನನಗೆ ಸಾಕಷ್ಟು ಹಣವನ್ನು ನೀಡಿದ್ದಾನೆ. ನಾನು ಆ ಹಣವನ್ನು ಎಲ್ಲಿ ತೆಗೆದುಕೊಂಡು ಹೋಗಲಿ” ಎಂದು ಹೇಳಿದ್ದಾರೆ.ಅಸ್ಸಾಂ ಪ್ರವಾಹದ ಫೋಟೋಗಳನ್ನು ನೋಡಿ ನನಗೆ ತುಂಬಾ ದುಃಖ ಆಗುತ್ತಿತ್ತು. ಹಾಗಾಗಿ ನಾನು ಬೇರೆ ಏನೂ ಯೋಚಿಸದೇ ಹಣವನ್ನು ದಾನ ಮಾಡಿದೆ, ಅಲ್ಲದೆ ತಾಯಿಯೊಬ್ಬರು ಮಕ್ಕಳನ್ನು ಭುಜದ ಮೇಲೆ ಎತ್ತಿಕೊಂಡು ಪ್ರವಾಹದ ನೀರಿನಲ್ಲಿ ಹೋಗುತ್ತಿರುವ ಫೋಟೋ ನೋಡಿ ನನ್ನ ಮನಸ್ಸಿಗೆ ತುಂಬಾ ಪ್ರಭಾವ ಬೀರಿತ್ತು. ಅವರ ಮುಖದಲ್ಲಿ ಯಾವುದೇ ದುಃಖ ಅಥವಾ ಒತ್ತಡ ಕಾಣಿಸಲಿಲ್ಲ. ನಾನು ಪ್ರವಾಹದ ಫೋಟೋಗಳನ್ನು ನೋಡಿದಾಗ ಇದು ನನ್ನ ಪತ್ನಿಯ ಜೊತೆ ಅಥವಾ ನನ್ನ ಮಗಳ ಜೊತೆನೂ ಸಂಭವಿಸಬಹುದು ಎಂದು ಅನಿಸಿತ್ತು. ಈ ರೀತಿಯ ಫೋಟೋಗಳನ್ನು ನೋಡಿದರೆ ನನ್ನ ಮನಸ್ಸು ಚುಚ್ಚುತ್ತದೆ. ಹಾಗಾಗಿ ನಾನು ಸಹಾಯಧನ ನೀಡಿದೆ ಎಂದು ಅಕ್ಷಯ್ ಹೇಳಿದ್ದಾರೆ.ಬಳಿಕ ಮಾತನಾಡಿದ ಅವರು, ನಾನು ಇದೇ ರೀತಿಯ ಪ್ರಾಣಿಗಳ ಫೋಟೋವನ್ನು ಕೂಡ ನೋಡಿದೆ. ದೇವರು ನನಗೆ ಸಾಕಷ್ಟು ಹಣವನ್ನು ನೀಡಿದ್ದಾರೆ. ನಾನು ಹಿಂದೆ ಮುಂದೆ ಯೋಚಿಸದೇ ಅಸ್ಸಾಂ ಪ್ರವಾಹಕ್ಕಾಗಿ ಹಣವನ್ನು ನೀಡಿದೆ ಎಂದು ಕಿಲಾಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


