ರಾಹುಲ್ ಗಾಂಧಿ ವಿಶ್ವದ ಅತ್ಯುತ್ತಮ ಸಹೋದರ: ರಕ್ಷಾ ಬಂಧನಕ್ಕೆ ಪ್ರಿಯಾಂಕಾ ವಾದ್ರಾ ವಿಶೇಷ ಉಡುಗೊರೆ
ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ತಮ್ಮ ಸಹೋದರ ರಾಹುಲ್ ಗಾಂಧಿ ಅವರನ್ನು 'ವಿಶ್ವದ ಅತ್ಯುತ್ತಮ ಸಹೋದರ' ಎಂದು ಬಣ್ಣಿಸಿದ್ದಾರೆ.

ನವದೆಹಲಿ: ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ತಮ್ಮ ಸಹೋದರ ರಾಹುಲ್ ಗಾಂಧಿ ಅವರನ್ನು 'ವಿಶ್ವದ ಅತ್ಯುತ್ತಮ ಸಹೋದರ' ಎಂದು ಬಣ್ಣಿಸಿದ್ದಾರೆ.
ಪ್ರಿಯಾಂಕಾ ತಮ್ಮ ಹಾಗೂ ರಾಹುಲ್ ಅವರ ಬಾಲ್ಯದ ಕೆಲ ಅಪರೂಪದ ಚಿತ್ರಗಳನ್ನು ಹಂಚಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. 'ವರ್ಷಗಳು ಕಳೆದರೂ ಸೋದರ-ಸೋದರಿ ಸಂಬಂಧ ಹಾಗೆಯೇ ಇದೆ. ಏನೂ ಬದಲಾಗಿಲ್ಲ ಎಂದು ನಾನು ಭಾವಿಸುತ್ತೇನೆ ! ರಾಹುಲ್ ತಮಗೆ ವಿಶ್ವದ ಅತ್ಯುತ್ತಮ ಸಹೋದರ' ಎಂದು ಪ್ರಿಯಾಂಕ ಪೋಸ್ಟ್ ಮಾಡಿದ್ದಾರೆ.
ರಕ್ಷಾಬಂಧನ ಹಬ್ಬವನ್ನು ಎಲ್ಲೆಡೆ ಇಂದು ಆಚರಿಸಲಾಗುತ್ತಿದೆ. ಸಹೋದರ-ಸಹೋದರಿಯರ ಬಾಂಧವ್ಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಸಹೋದರಿಯರು ಅಣ್ಣನಿಗೆ ರಾಖಿ ಕಟ್ಟಿ ಸಮೃದ್ಧಿ, ಆರೋಗ್ಯದ ಶುಭಕೋರುತ್ತಾರೆ. ಹಾಗೆಯೇ ಸಹೋದರರೂ ಪರಸ್ಪರ ಶುಭ ಕೋರಿ ಸೋದರರಿಗೆ ಉಡುಗೊರೆ ನೀಡುತ್ತಾರೆ. ಈ ಬಾರಿ ಸ್ವಾತಂತ್ರ್ಯ ದಿನದಂದೇ ರಕ್ಷಾ ಬಂಧನ್ ಹಬ್ಬ ಆಚರಿಸುತ್ತಿರುವುದು ವಿಶೇಷವಾಗಿದೆ.
@RahulGandhi I guess things haven’t changed that much, haan?!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


