ಅಮರನಾಥ ಯಾತ್ರಿಕರ ಗುರಿಯಾಗಿಸಿ ವಿದ್ವಂಸಕ್ಕೆ ಪಾಕ್ ಸೇನೆ ನೆರವು; ಅಮೆರಿಕ ರೈಫಲ್ ವಶ!
ಜಮ್ಮು ಮತ್ತು ಕಾಶ್ಮೀರ ಗಡಿ ಕಾಯಲು ಮತ್ತೆ 28 ಸಾವಿರ ಯೋಧರನ್ನು ನಿಯೋಜಿಸಿದ ಬೆನ್ನಲ್ಲೇ ಭಾರತೀಯ ಯೋಧರು ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿಕೊಂಡು...
Published On :
ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ ಗಡಿ ಕಾಯಲು ಮತ್ತೆ 28 ಸಾವಿರ ಯೋಧರನ್ನು ನಿಯೋಜಿಸಿದ ಬೆನ್ನಲ್ಲೇ ಭಾರತೀಯ ಯೋಧರು ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿಕೊಂಡು ವಿದ್ವಂಸಕ ಕೃತ್ಯಕ್ಕೆ ಉಗ್ರರಿಗೆ ಪಾಕಿಸ್ತಾನ ಸೇನೆ ನೆರವು ನೀಡಿದ್ದು ಬಹಿರಂಗವಾಗಿದ್ದು ಇಂದು ಭಾರತೀಯ ಸೇನೆ ಪಾಕ್ ಮೂಲದ ಉಗ್ರನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಭಾರತೀಯ ಸೇನೆ ಮತ್ತು ಜಮ್ಮು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಉಗ್ರನ ಸಂಚು ಅರಿತ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಉಗ್ರನನ್ನು ಹೊಡೆದುರುಳಿಸಿದೆ. ಇನ್ನು ಪಾಕಿಸ್ತಾನ ಸೇನೆ ಬಳಸುವ ಅಮೆರಿಕ ಉತ್ಪಾದಿತ ರೈಫಲ್ ಒಂದು ಉಗ್ರನ ಬಳಿ ಸಿಕ್ಕಿದೆ.
ಸದ್ಯ ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian ArmyPakistan Armyಭಯೋತ್ಪಾದಕterroristಪಾಕಿಸ್ತಾನ ಸೇನೆಭಾರತೀಯ ಸೇನೆಅಮರನಾಥ ಯಾತ್ರೆAmarnath YatraSniper Rifleಸ್ಪಿನ್ನರ್ ರೈಫಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

