ದೇಶ

ಮಾಲ್ಡೀವ್ಸ್ ಅಧ್ಯಕ್ಷರ ಹತ್ಯೆಗೆ ಸಂಚು: ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಉಪಾಧ್ಯಕ್ಷ ಭಾರತಕ್ಕೆ ಅಕ್ರಮ ಪ್ರವೇಶ, ಬಂಧನ!

ಮಾಲ್ದೀವ್ಸ್​ನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣ ಸಂಬಂಧ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಉಪಾಧ್ಯಕ್ಷ ಅಹಮದ್ ಅದೀಬ್ ಭಾರತಕ್ಕೆ ಅಕ್ರಮ ಪ್ರವೇಶ...

ಮಾಲ್ಡೀವ್ಸ್ ಅಧ್ಯಕ್ಷರ ಹತ್ಯೆಗೆ ಸಂಚು: ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಉಪಾಧ್ಯಕ್ಷ ಭಾರತಕ್ಕೆ ಅಕ್ರಮ ಪ್ರವೇಶ, ಬಂಧನ!
ಅಹ್ಮದ್ ಅದೀಬ್
Published On :
ನವದೆಹಲಿ: ಮಾಲ್ದೀವ್ಸ್​ನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣ ಸಂಬಂಧ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಉಪಾಧ್ಯಕ್ಷ ಅಹಮದ್ ಅದೀಬ್ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದು ತೂತುಕುಡಿಯಲ್ಲಿ ಆತನನ್ನು ಬಂಧಿಸಲಾಗಿದೆ.
ಮಾಲ್ಡೀವ್ಸ್ ನಲ್ಲಿ ತನಗೆ ಜೀವ ಬೆದರಿಕೆ ಇದೆ ಹೇಳಿ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿ ಆಶ್ರಯ ಅರಸಿ ಬಂದಿದ್ದ ಅಹ್ಮದ್ ಅದೀಬ್ ನನ್ನು ಸದ್ಯ ಬಂಧಿಸಲಾಗಿದ್ದು ಗುಪ್ತಚರ ಮತ್ತು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. 
ಜುಲೈ 11ರಂದು ವಿರ್ಗೋ ಎಂಬ ದೋಣಿ ಮಾಲ್ಡೀವ್ಸ್ ಗೆ ಸರಕುಗಳನ್ನು ತೆಗೆದುಕೊಂಡು ಹೋಗಿತ್ತು. ನಂತರ ಅಲ್ಲಿಂದ ಜುಲೈ 28ರಂದು ಮರಳುವಾಗ ಅಹ್ಮದ್ ಅದೀಬ್ ತನಗೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಹೇಳಿ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದ. ಈ ಹಡಗಿನಲ್ಲಿ ಎಂಟು ಮಂದಿ ಇಂಡೋನೇಷಿಯನ್ನರು ಮತ್ತು ಒಬ್ಬರು ಭಾರತೀಯ ಸೇರಿ ಒಂಬತ್ತು ಹಡಗಿನ ಸಿಬ್ಬಂದಿ ಇದ್ದರು.
ಗುರುವಾರ ತೂತುಕುಡಿ ಹಳೆಯ ಬಂದರಿಗೆ ದೋಣಿ ತಲುಪಿದ್ದು ಈ ವೇಳೆ ಸಿಬ್ಬಂದಿ ಬಂದರು ಅಧಿಕಾರಿಗಳಿಗೆ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅಹ್ಮದ್ ತಮ್ಮ ದೋಣಿಯಲ್ಲಿ ಪ್ರಯಾಣ ಬೆಳೆಸಿರುವುದಾಗಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂದರು ಅಧಿಕಾರಿಗಳು ಅದೀಬ್ ನನ್ನು ಬಂಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.