ದೇಶ

ಹಿಟ್ಲರ್ ಫೇಕ್ ಫೋಟೋ ಬಳಸಿ ಪಿಎಂ ಮೋದಿ ಕಾಲೆಳೆಯಲು ಹೋಗಿ ಮುಖಭಂಗಕ್ಕೀಡಾದ ನಟಿ ರಮ್ಯಾ!

ನಟಿ ಕಮ್ ರಾಜಕಾರಣಿ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಸರ್ವಾಧಿಕಾರಿ...

ಹಿಟ್ಲರ್ ಫೇಕ್ ಫೋಟೋ ಬಳಸಿ ಪಿಎಂ ಮೋದಿ ಕಾಲೆಳೆಯಲು ಹೋಗಿ ಮುಖಭಂಗಕ್ಕೀಡಾದ ನಟಿ ರಮ್ಯಾ!
ಅಡಾಲ್ಫ್ ಹಿಟ್ಲರ್-ನರೇಂದ್ರ ಮೋದಿ-ರಮ್ಯಾ
Published On :
ನವದೆಹಲಿ: ನಟಿ ಕಮ್ ರಾಜಕಾರಣಿ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಸರ್ವಾಧಿಕಾರಿ ಹಿಟ್ಲರ್ ಅವರ ಫೇಕ್ ಫೋಟೋ ಬಳಸಿ ಪ್ರಧಾನಿ ಮೋದಿಯ ಕಾಲೆಳೆಯಲು ಹೋಗಿ ತಾವೇ ಮುಖಭಂಗಕ್ಕೀಡಾಗಿದ್ದಾರೆ. 
ಪ್ರಧಾನಿ ಮೋದಿ ಕ್ಯೊಟೋದ ಬುದ್ದಿಸ್ಟ್ ದೇವಸ್ತಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಬಾಲಕನೊಬ್ಬನ ಕಿವಿಯನ್ನು ನಯವಾಗಿ ಹಿಂಡುವ ಮೂಲಕ ಫೋಟೋಗೆ ಪೋಸ್ ಕೊಟ್ಟಿದ್ದರು. ಈ ಫೋಟೋಗೆ ಹಿಟ್ಲರ್ ಬಾಲಕಿಯ ಕಿವಿ ಹಿಂಡುತ್ತಿರುವ ಫೇಕ್ ಫೋಟೋವನ್ನು ಕ್ಲಬ್ ಮಾಡಿ ಹಾಕಿ ಈ ಇಬ್ಬರ ಫೋಟೋವನ್ನು ನೋಡಿದರೆ ನಿಮಗೆ ಏನನಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. 
ಇನ್ನು ಹಿಟ್ಲರ್ ಬಾಲಕಿಯ ಭುಜವನ್ನು ಹಿಡಿದುಕೊಂಡಿರುವ ಫೋಟೋವನ್ನು ತಿರುಚಿ ಕಿವಿಯನ್ನು ಹಿಂಡುತ್ತಿರುವಂತೆ ತೋರಿಸಿದ್ದಾರೆ. ಇದಕ್ಕೆ ಟ್ವೀಟರಿಗರು ಒರಿಜಿನಲ್ ಫೋಟೋವನ್ನು ಹಾಕಿ ರಮ್ಯಾರನ್ನು ಟೀಕಿಸುತ್ತಿದ್ದಾರೆ.
Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.