ತ.ನಾ, ಆಂಧ್ರ ತೀರಕ್ಕೆ ಅಪ್ಪಳಿಸಲಿದೆ ಫ್ಯಾನಿ ಚಂಡಮಾರುತ; ಮುಂದಿನ ವಾರ ವ್ಯಾಪಕ ಮಳೆ ಸಾಧ್ಯತೆ
ಹಿಂದೂ ಮಹಾಸಾಗರ ಮತ್ತು ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತಷ್ಟು ತೀವ್ರವಾಗಿದ್ದು ...

Published On :
ಚೆನ್ನೈ: ಹಿಂದೂ ಮಹಾಸಾಗರ ಮತ್ತು ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತಷ್ಟು ತೀವ್ರವಾಗಿದ್ದು ಫ್ಯಾನಿ ಚಂಡಮಾರುತ ನಾಳೆ ತಮಿಳುನಾಡಿಗೆ ಕಾಲಿಟ್ಟು ಮುಂದಿನ ವಾರ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಇದರಿಂದ ಕರ್ನಾಟಕದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಹ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಚೆನ್ನೈಯ ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, ನಿನ್ನೆ ವಾಯುಭಾರ ಕುಸಿತ ತೀವ್ರವಾಗಿದ್ದು ಚಂಡಮಾರುತ ಬೀಸಲು ಆರಂಭವಾಗಿದೆ. ನಾಳೆ ಉತ್ತರ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ದಕ್ಷಿಣ ತೀರಕ್ಕೆ ಮುಂದಿನ ಮಂಗಳವಾರ ಸಾಯಂಕಾಲ ಕಾಲಿಡಲಿದೆ ಎಂದು ಹೇಳಿದೆ.
ಇದುವರೆಗೆ ಮಳೆ ಇಲ್ಲದೆ ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಚೆನ್ನೈ, ತಿರುವಲ್ಲೂರು ಮತ್ತು ಕಂಚೀಪುರಂ ನ ಹಲವು ಪ್ರದೇಶಗಳು ಮಳೆಯಿಂದ ಅತ್ಯಂತ ಹೆಚ್ಚು ಲಾಭ ಪಡೆಯಲಿದ್ದು ಏಪ್ರಿಲ್ 30 ಮತ್ತು ಮೇ 1ರಂದು ತಮಿಳು ನಾಡಿನ ಉತ್ತರ ತೀರದಲ್ಲಿ ಹಗುರದಿಂದ ಕೂಡಿದ ಭಾರೀ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ವಾರ 100 ಮಿಲಿ ಮೀಟರ್ ನಿಂದ 200 ಮಿಲಿ ಮೀಟರ್ ವರೆಗೆ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ವರದಿಗಳು ತಿಳಿಸಿವೆ. ತಮಿಳುನಾಡು ತೀರದಲ್ಲಿ 1200 ಕಿಲೋ ಮೀಟರ್ ವರೆಗೆ ಫ್ಯಾನಿ ಚಂಡಮಾರುತದ ವ್ಯಾಪ್ತಿ ವಿಸ್ತಾರವಾಗಲಿದ್ದು 400 ಕಿಲೋ ಮೀಟರ್ ವರೆಗೆ ಮಳೆ ಸುರಿಯಲಿದೆ. ಸೋಮವಾರದ ಹೊತ್ತಿಗೆ ಸ್ಪಷ್ಟ ಚಿತ್ರಣ ತಿಳಿಯಲಿದೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tamil Naduತಮಿಳು ನಾಡುಭಾರತೀಯ ಹವಾಮಾನ ಇಲಾಖೆFani cycloneIndian Meterological departmentAndra coastಫ್ಯಾನಿ ಚಂಡಮಾರುತಆಂಧ್ರ ತೀರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


