ದೇಶ

ನನ್ನನ್ನು ಭಯೋತ್ಪಾದಕನ ರೀತಿ ಕಾಣುತ್ತಿದ್ದಾರೆ: ಆಜಂ ಖಾನ್ ಕಣ್ಣೀರು

ನನ್ನನ್ನು ರಾಜ್ಯದ ಆಡಳಿತ ಭಯೋತ್ಪಾದಕನ ರೀತಿ ನೋಡುತ್ತಿದೆ ಎಂದು ಸಮಾಜಾವಾದಿ ಪಕ್ಷದ ನಾಯಕ ಆಜಂ ಖಾನ್ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

ನನ್ನನ್ನು ಭಯೋತ್ಪಾದಕನ ರೀತಿ ಕಾಣುತ್ತಿದ್ದಾರೆ: ಆಜಂ ಖಾನ್ ಕಣ್ಣೀರು
ನನ್ನನ್ನು ಭಯೋತ್ಪಾದಕನ ರೀತಿ ಕಾಣುತ್ತಿದ್ದಾರೆ: ಆಜಂ ಖಾನ್ ಕಣ್ಣೀರು
Published On :
ರಾಮ್ ಪುರ: ನನ್ನನ್ನು ರಾಜ್ಯದ ಆಡಳಿತ ಭಯೋತ್ಪಾದಕನ ರೀತಿ ನೋಡುತ್ತಿದೆ ಎಂದು ಸಮಾಜಾವಾದಿ ಪಕ್ಷದ ನಾಯಕ ಆಜಂ ಖಾನ್ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ. 
ಉತ್ತರ ಪ್ರದೇಶದ ರಾಮ್ ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಆಜಂ ಖಾನ್, ನನ್ನನ್ನು ರಾಷ್ಟ್ರವಿರೋಧಿ, ದೇಶದ್ರೋಹಿ ರೀತಿಯಲ್ಲಿ ಕಾಣಲಾಗುತ್ತಿದೆ. ನನ್ನ ಬೆಂಬಲಿಗರ ವಿರುದ್ಧ ತೀವ್ರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಜಂ ಖಾನ್ ಆರೋಪಿಸಿದ್ದಾರೆ.
ಇದು ಯಾವ ರೀತಿಯ ಪ್ರಜಾಪ್ರಭುತ್ವ? ನನ್ನ ಬೆಂಬಲಿಗರ ಮನೆಗಳಿಗೆ ಬೀಗ ಹಾಕಲಾಗುತ್ತಿದೆ. ನನ್ನ ಬೆಂಬಲಿಗ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಲಾಗಿದೆ ಎಂದು ಆಜಂ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಬಿಜೆಪಿ ಅಭ್ಯರ್ಥಿ ಜಯಪ್ರದ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದ ಆಜಂ ಖಾನ್ ವಿರುದ್ಧ ಕ್ರಮ ಕೈಗೊಂಡಿದ್ದ ಚುನಾವಣಾ ಆಯೋಗ, ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.