ಕಾಂಗ್ರೆಸ್ ಸೇರಿದ ಅಪ್ರಾಪ್ತ ಬಾಲಕಿ ಅತ್ಯಾಚಾರ ಆರೋಪಿ ಮಾಜಿ ಗೋವಾ ಸಚಿವ, ಪಣಜಿಯಿಂದ ಸ್ಪರ್ಧೆ?
ಗೋವಾ ಮಾಜಿ ಬಿಜೆಪಿ ಶಿಕ್ಷಣ ಸಚಿವ ಅಟನಾಸಿಯೋ ಮಾನ್ಸೆರಾಟೆ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಪಣಜಿಯಿಂದ...

Published On :
ಪಣಜಿ: ಗೋವಾ ಮಾಜಿ ಬಿಜೆಪಿ ಶಿಕ್ಷಣ ಸಚಿವ ಅಟನಾಸಿಯೋ ಮಾನ್ಸೆರಾಟೆ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಪಣಜಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದಿಂದ ತೆರವಾಗಿದ್ದ ಪಣಜಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮನೋಹರ್ ಪುತ್ರ ಉತ್ಪಾಲ್ ಪರಿಕ್ಕರ್ ಸ್ಪರ್ಧಿಸುತ್ತಿದ್ದು ಇವರಿಗೆ ಎದುರಾಗಿ ಕಾಂಗ್ರೆಸ್ ಕಡೆಯಿಂದ ಅಟನಾಸಿಯೋ ಸ್ಪರ್ಧಿಸುವ ಸಾಧ್ಯತೆ ಇದೆ.
ಪಕ್ಷಗಳನ್ನು ಬದಲಾಯಿಸುವುದರಲ್ಲಿ ಮಾನ್ಸೆರಾಟೆ ಇತಿಹಾಸವೇ ಇದೆ. ಹೌದು ಯುನೈಟೆಡ್ ಗೋವನ್ ಡೆಮೋಕ್ರಾಟಿಕ್ ಪಾರ್ಟಿ(ಯುಜಿಡಿಪಿ) ರಾಜಕೀಯ ಜೀವನ ಆರಂಭಿದ್ದ ಅವರು ನಂತರ 2004ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿರುವ ಮಾನ್ಸೆರಾಟೆ ಇದೀಗ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್bjpಬಿಜೆಪಿpanajiಪಣಜಿRape accusedಅತ್ಯಾಚಾರಿ ಆರೋಪಿAtanasio Monserrateಅಟನಾಸಿಯೋ ಮಾನ್ಸೆರಾಟೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


