ಪತ್ನಿಯ ಮೇಲಿನ ಸಿಟ್ಟು: ಇಬ್ಬರು ಮಕ್ಕಳ ಕೊಂದು, ಮೂರನೇ ಮಗುವನ್ನೂ ಕೊಲ್ಲಲೆತ್ನಿಸಿದ ತಂದೆಯ ಬಂಧನ
ಜಿಲ್ಲೆಯ ರಾಮಚಂದ್ರಪುರಂನ ಬೊಂಬಾಯಿ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ, ಪತ್ನಿಯ ಮೇಲಿನ ಸಿಟ್ಟಿನಿಂದ ಕಂಠಪೂರ್ತಿ ಕುಡಿದು ಬಂದು ರಾತ್ರಿ ಮನೆಯಲ್ಲಿ ಮಲಗಿದ್ದ...

Published On :
ಸಂಗಾರೆಡ್ಡಿ: ಜಿಲ್ಲೆಯ ರಾಮಚಂದ್ರಪುರಂನ ಬೊಂಬಾಯಿ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ, ಪತ್ನಿಯ ಮೇಲಿನ ಸಿಟ್ಟಿನಿಂದ ಕಂಠಪೂರ್ತಿ ಕುಡಿದು ಬಂದು ರಾತ್ರಿ ಮನೆಯಲ್ಲಿ ಮಲಗಿದ್ದ ಏಳು ವರ್ಷದ ಮಗ, 4ವರ್ಷದ ಮಗಳನ್ನು ಉಸಿರು ಗಟ್ಟಿಸಿಕೊಂದಿದ್ದಲ್ಲದೆ, 10ವರ್ಷದ ದೊಡ್ಡ ಮಗಳನ್ನು ಹತ್ಯೆ ನಡೆಸಲು ಮುಂದಾದಾಗ ಆಕೆ ತೀವ್ರ ಗಾಯಗೊಂಡು ತಪ್ಪಿಸಿಕೊಂಡಿರುವ ಭಯಾನಕ ಘಟನೆ ಮಂಗಳವಾರ ಮಧ್ಯರಾತ್ರಿ ರಾತ್ರಿ ನಡೆದಿದೆ.
ಬೊಂಬಾಯಿ ಕಾಲೋನಿಯಲ್ಲಿ ಕುಮಾರ್ ಎಂಬುವನು, ತನ್ನ ಪತ್ನಿ ಶಿರಿಷಾ ಹಾಗೂ ಮೂವರು ಮಕ್ಕಳಾದ ಮಲ್ಲೇಶ್ವರಿ (10), ಅಖಿಲ್(7) ಹಾಗೂ ಶರಣ್ಯ (4) ರೊಂದಿಗೆ ವಾಸವಾಗಿದ್ದ.
ಪತಿಯೊಂದಿಗೆ ಗಲಾಟೆ ಮಾಡಿಕೊಂಡ ಪತ್ನಿ ಶಿರಿಷ ಇತ್ತೀಚಿಗೆ ತವರು ಮನೆಗೆ ಸೇರಿದ್ದಳು. ಇದರಿಂದ ತೀವ್ರ ಕುಪಿತಗೊಂಡ ಕುಮಾರ್ ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದು ಪುಟ್ಟ ಮಕ್ಕಳಾದ ಅಕಿಲ್, ಶರಣ್ಯರ ಕತ್ತು ಹಿಸುಕಿ ಸಾಯಿಸಿ, ದೊಡ್ಡ ಮಗಳು ಶರಣ್ಯಾಳನ್ನು ಚಾಕುವಿನಿಂದ ಹಿರಿದು ಕೊಲ್ಲಲು ಮುಂದಾದಾಗ ಆಕೆ ತೀವ್ರವಾಗಿ ಗಾಯಗೊಂಡು ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಕುಮಾರ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


