ದೇಶ

ಇದು ಸುಳ್ಳು ಸುದ್ದಿ! ಮಾಜಿ ಯೋಧರು ರಾಷ್ಟ್ರಪತಿಗೆ ಯಾವ ಪತ್ರ ಬರೆದಿಲ್ಲ: ರಾಷ್ಟ್ರಪತಿ ಭವನ ಸ್ಪಷ್ಟನೆ

: ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಲುತ್ತಿದ್ದಾರೆ ಎಂದು ರಾಷ್ಟ್ರಪತಿಗೆ ಮಾಜಿ ಸೈನಿಕರು ಪತ್ರ ಮುಖೇನ ದೂರು ಸಲ್ಲಿಸಿದ್ದಾರೆ ಎಂಬ ಸುದ್ದಿ ಸುಳ್ಳು...

ಇದು ಸುಳ್ಳು ಸುದ್ದಿ! ಮಾಜಿ ಯೋಧರು ರಾಷ್ಟ್ರಪತಿಗೆ ಯಾವ ಪತ್ರ ಬರೆದಿಲ್ಲ: ರಾಷ್ಟ್ರಪತಿ ಭವನ ಸ್ಪಷ್ಟನೆ
ಇದು ಸುಳ್ಳು ಸುದ್ದಿ! ಮಾಜಿ ಯೋಧರು ರಾಷ್ಟ್ರಪತಿಗೆ ಯಾವ ಪತ್ರ ಬರೆದಿಲ್ಲ: ರಾಷ್ಟ್ರಪತಿ ಭವನ ಸ್ಪಷ್ತನೆ
Published On :
ನವದೆಹಲಿ: ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಲುತ್ತಿದ್ದಾರೆ ಎಂದು ರಾಷ್ಟ್ರಪತಿಗೆ ಮಾಜಿ ಸೈನಿಕರು ಪತ್ರ ಮುಖೇನ ದೂರು ಸಲ್ಲಿಸಿದ್ದಾರೆ ಎಂಬ ಸುದ್ದಿ ಸುಳ್ಳು, ಅಂತಹಾ ಯಾವುದೇ ಪತ್ರ ರಾಷ್ಟ್ರಪತಿಗಳಿಗೆ ತಲುಪಿಲ್ಲ ಎಂದು ರಾಷ್ಟರಪತಿ ಭವನ ಸ್ಪಷ್ಟನೆ ನಿಡಿದೆ.
ಸಶಸ್ತ್ರ ಪಡೆಯ ಎಂಟು ಮಾಜಿ ಮುಖ್ಯಸ್ಥರು ಹಾಗೂ ಇತರೆ 148 ಮಿಲಿಟರಿ ಪರಿಣತರು ಶಸ್ತ್ರಪಡೆಗಳ ಸಾಹಸವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಈ ಸಂಬಂಧ ಕ್ರಮ ಕೈಗೊಳ್ಲಬೇಕೆಂದುರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.
ಆದರೆ ಈ ಸುದ್ದಿ ಸುಳ್ಳು ಎಂದು ರಾಷ್ಟ್ರಪತಿ ಭವನ ಹೇಳಿದೆ. ಅಲ್ಲದೆ ಪತ್ರದಲ್ಲಿ ನಿವೃತ್ತ ಜನರಲ್ ಎಸ್‌.ಎಫ್‌.ರೊಡ್ರಿಗಸ್‌ ಸಹಿ ಇರುವುದಾಗಿಯೂ ಹೇಳಲಾಗಿತ್ತು. ಆದರೆ ತಾವು ಅಂತಹಾ ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ , ಇದು ಸುಳ್ಳು ಎಂದು ರೊಡ್ರಿಗಸ್‌ರವರ ಸ್ವತಃಅ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಪತ್ರಕ್ಕೆ ಸಹಿ ಹಾಕಿದ್ದ ಬಗ್ಗೆ ಏರ್ ಚೀಫ್ ಮಾರ್ಷಲ್ ಎನ್.ಸಿ.ಸೂರಿ ಮಾತನಾಡಿ ಇದು ಅಡ್ಮಿರಲ್ ರಾಮ್ ದಾಸ್ ಅವರ ಪತ್ರವಲ್ಲ, ಇದನ್ನು ಮೇಜರ್ ಚೌಧರಿ  ಎಂಬ ಇನ್ನಾರೋ ಬರೆದಿದ್ದಾರೆ.ಇದು ನನ್ನ ಗಮನಕ್ಕೆ ಬಂದಂತೆ ಸತ್ಯವಾಗಿಯೂ ಬರೆದಿದ್ದಲ್ಲ, ಸಶಸ್ತ್ರ ಪಡೆಗಳು ರಾಜಕೀಯವಾಗಿ ಚುನಾಯಿತ ಸರ್ಕಾರಕ್ಕೆ ಬೆಂಬಲ ನೀಡುತ್ತಿವೆ ಎಂದು ನಾನು ಬರೆದಿದ್ದೇನೆ ಎನ್ನಲಾಗುತ್ತಿದ್ದು ಇದು ಸುಳ್ಳು,  ಅಂತಹ ಯಾವುದೇ ಪತ್ರಕ್ಕೆ ನನ್ನ ಒಪ್ಪಿಗೆಯನ್ನು ತೆಗೆದುಕೊಂಡಿಲ್ಲ.ಆ ಪತ್ರದಲ್ಲಿ ಬರೆಯಲ್ಪಟ್ಟಿದ್ದರೂ ನಾನು ಒಪ್ಪಿಕೊಳ್ಳುವುದಿಲ್ಲ. . ರಾಮ್ ದಾಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.