ಬಿಜೆಪಿ ತನ್ನ ವಿರೋಧಿಗಳನ್ನು 'ರಾಷ್ಟ್ರ-ವಿರೋಧಿ, ಶತ್ರುಗಳೆಂದು' ಎಂದೂ ಭಾವಿಸಿಲ್ಲ: ಎಲ್.ಕೆ. ಅಡ್ವಾಣಿ
ಬಿಜೆಪಿ ತನ್ನನ್ನು ರಾಜಕೀಯವಾಗಿ ಒಪ್ಪದವರನ್ನು ರಾಷ್ಟ್ರದ ವಿರೋಧಿಗಳೆಂದು, ಶತ್ರುಗಳೆಂದು ಎಂದಿಗೂ ಪರಿಗಣಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹೇಳಿದ್ದಾರೆ.

Published On :
ನವದೆಹಲಿ: ಬಿಜೆಪಿ ತನ್ನನ್ನು ರಾಜಕೀಯವಾಗಿ ಒಪ್ಪದವರನ್ನು ರಾಷ್ಟ್ರದ ವಿರೋಧಿಗಳೆಂದು, ಶತ್ರುಗಳೆಂದು ಎಂದಿಗೂ ಪರಿಗಣಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹೇಳಿದ್ದಾರೆ.
ಏ.06 ರಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಬ್ಲಾಗ್ ಬರೆದಿರುವ ಎಲ್ ಕೆ ಅಡ್ವಾಣಿ, " ವೈವಿಧ್ಯತೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಗೌರವಿಸುವುದು ಭಾರತೀಯ ಪ್ರಜಾಪ್ರಭುತ್ವದ ಸಾರ, ಬಿಜೆಪಿ ಸ್ಥಾಪನೆಯಾದ ದಿನದಿಂದಲೂ, ತನ್ನ ರಾಜಕೀಯ ವಿರೋಧಿಗಳನ್ನು ಶತ್ರುಗಳೆಂದು ಭಾವಿಸಿಲ್ಲ, ಬದಲಾಗಿ ಎದುರಾಳಿಗಳೆಂದಷ್ಟೇ ಪರಿಗಣಿಸಿದೆ ಎಂದು ಹೇಳಿದ್ದಾರೆ.
5 ವರ್ಷಗಳ ನಂತರ ಬ್ಲಾಗ್ ಬರೆದಿರುವ ಅಡ್ವಾಣಿ, ಭಾರತೀಯ ರಾಷ್ಟ್ರೀಯತೆಯ ಕಲ್ಪನೆಯಲ್ಲಿಯೂ ಸಹ ರಾಜಕೀಯ ವಿರೋಧಿಗಳನ್ನು ದೇಶ ವಿರೋಧಿಗಳೆಂದು ಎಂದಿಗೂ ಪರಿಗಣಿಸಲಾಗಿಲ್ಲ. ರಾಜಕೀಯವಾಗಿ ಹಾಗೂ ವೈಯಕ್ತಿವಾಗಿ ಪ್ರತಿ ಪ್ರಜೆಯ ಆಯ್ಕೆಯ ಸ್ವಾತಂತ್ರ್ಯಕ್ಕೆ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರದ ಭದ್ರತೆಯನ್ನು ಚುನಾವಣೆಯ ವಿಷಯವಾಗಿರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿಪಕ್ಷಗಳನ್ನು ದೇಶ ವಿರೋಧಿಗಳೆಂದು ಆರೋಪಿಸುತ್ತಿರುವ ಸಂದರ್ಭದಲ್ಲೇ ಅಡ್ವಾಣಿ ಅವರ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


