ಮಾಜಿ ಶಾಸಕನಿಂದ ಅತ್ಯಾಚಾರ: ಒಡಿಶಾ ಸಿಎಂ ಮನೆ ಮುಂದೆ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ
ಬಿಜೆಡಿ ಮಾಜಿ ಶಾಸಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರು ಇಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

Published On :
ಭುವನೇಶ್ವರ: ಬಿಜೆಡಿ ಮಾಜಿ ಶಾಸಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರು ಇಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
2014 ರಲ್ಲಿ ಬಿಜು ಜನತಾ ದಳ ಎಂಎಲ್ಎ ಶ್ರೀನಾಥ್ ಸೋರನ್ ಗೆ ತಾನು ಕೆಲಸ ಪಡೆದುಕೊಳ್ಳಲಿಕ್ಕಾಗಿ 1 ಲಕ್ಷ ರೂ. ನೀಡಿದ್ದನೆಂದು ಆರೋಪಿಸಿದ ಮಹಿಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಕ್ಕೆ ಯತ್ನಿಸಿದ್ದಾರೆ. ಆವೇಳೆ ಭದ್ರತಾ ಸಿಬ್ಬಂದಿಗಳು ಆಕೆಯನ್ನು ತಡೆದು ದೂರ ಕಳಿಸಿದ್ದಾರೆ.
"ಸೊರೆನ್ ಕೆಲಸವನ್ನು ಕೊಡಿಸುವುದಾಗಿ ಮಹಿಳೆಯಿಂದ ಹಣ ಪಡೆಇದ್ದರು, ಆದರೆ ಆ ವಾಗ್ದಾನವನ್ನು ಅವರು ಪೂರೈಸಿರಲಿಲ್ಲ. ಇದರಿಂದ ಬೇಸತ್ತ ಮಹಿಳೆ ಮುಖ್ಯಮಂತ್ರಿ ನಿವಾಸದೆದುರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಅವರ ಆರೋಗ್ಯ ಸ್ಥಿಅವಾಗಿದೆ"ಪೊಲೀಸರು ಹೇಳಿದ್ದಾರೆ.
2014ರಲ್ಲಿ, ಸೊರೆನ್ ಮತ್ತು ಅವರ ಸಹಾಯಕ ಸ್ವರೂಪ್ ದಾಸ್ ಅವರ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ ದಾಖಲಾಗಿತ್ತು.ಸರ್ಕಾರಿ ಕೆಲಸಕ್ಕಾಗಿ ಸೊರೆನ್ ಗೆ 1 ಲಕ್ಷ ರೂಪಾಯಿ ನೀಡಿರುವುದಾಗಿ ಮಹಿಳೆ ಆರೋಪಿಸಿದ ಬಳಿಕ ಈ ಪ್ರಕರಣ ದಾಖಲಾಗಿದೆ. ಸೊರೆನ್ ತನ್ನ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದ ಕಾರಣ, ಹಣವನ್ನು ಹಿಂದಿರುಗಿಸಲು ಆಕೆ ಒತ್ತಾಯಿಸಿದ್ದು ಆ ವೇಳೆ ಹಣ ಹಿಂಪಡೆಯಲು ಆಗಮಿಸುವಂತೆ ಹೇಳಿದ್ದ ಮಾಜಿ ಶಾಸಕ ಸೊರೆನ್ ತನ್ನ ಸಹಾಯಕನ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರೆಂದು ಆಕೆ ದೂರಿನಲ್ಲಿ ಹೇಳೀದ್ದಾರೆ. .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


