ದೇಶ

ರಾಫೆಲ್ ಒಪ್ಪಂದ: ಪ್ರಧಾನಿ ಪರ ನಿಂತ ಶರದ್ ಪವಾರ್; ಮೋದಿ ವಿರೋಧಿಗಳಿಗೆ ಮರ್ಮಾಘಾತ!

ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್-ಮಹಾಘಟಬಂಧನದ ಜೊತೆ ಗುರಿತಿಸಿಕೊಂಡಿದ್ದ ಎನ್ ಸಿಪಿ ನಾಯಕ ಶರತ್ ಪವಾರ್ ರಾಫೆಲ್ ಒಪ್ಪಂದದ ಕುರಿತ ಪ್ರಧಾನಿ ನರೇಂದ್ರ ಮೋದಿ ಪರ ನಿಂತಿದ್ದಾರೆ.

ರಾಫೆಲ್ ಒಪ್ಪಂದ: ಪ್ರಧಾನಿ ಪರ ನಿಂತ ಶರದ್ ಪವಾರ್; ಮೋದಿ ವಿರೋಧಿಗಳಿಗೆ ಮರ್ಮಾಘಾತ!
ಶರತ್ ಪವಾರ್
Published On :
ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್-ಮಹಾಘಟಬಂಧನದ ಜೊತೆ ಗುರಿತಿಸಿಕೊಂಡಿದ್ದ ಎನ್ ಸಿಪಿ ನಾಯಕ ಶರದ್ ಪವಾರ್ ರಾಫೆಲ್ ಒಪ್ಪಂದದ ಕುರಿತ ಪ್ರಧಾನಿ ನರೇಂದ್ರ ಮೋದಿ ಪರ ನಿಂತಿದ್ದಾರೆ. 
ಒಂದೆಡೆ ಕಾಂಗ್ರೆಸ್ ರಾಫೆಲ್ ಒಪ್ಪಂದದಲ್ಲಿ ಪ್ರಧಾನಿ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದರೆ, ಮತ್ತೊಂದೆಡೆ ಯುಪಿಎ ಮಿತ್ರಪಕ್ಷದಲ್ಲಿ ಗುರುತಿಸಿಕೊಂಡಿದ್ದ ಶರತ್ ಪವಾರ್ "ಪ್ರಧಾನಿ ನರೇಂದ್ರ ಮೋದಿ ಉದ್ದೇಶಗಳ ಬಗ್ಗೆ ಜನರಿಗೆ ಅನುಮಾನಗಳಿಲ್ಲ" ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 
ಮರಾಠಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ರಕ್ಷಣಾ ಸಚಿವ ಶರತ್ ಪವಾರ್,  ರಾಫೆಲ್ ವಿಮಾನಗಳ ತಾಂತ್ರಿಕ ವಿವರಗಳನ್ನು ಕೇಳುತ್ತಿರುವ ವಿಪಕ್ಷಗಳ ಬೇಡಿಕೆ ಸೂಕ್ತವಾಗಿಲ್ಲ. ಆದರೆ ರಾಫೆಲ್ ವಿಮಾನಗಳ ಬೆಲೆಯನ್ನು ಬಹಿರಂಗಗೊಳಿಸುವುದರಲ್ಲಿ ಸರ್ಕಾರಕ್ಕೆ ಯಾವುದೇ ಸಮಸ್ಯೆಯೂ ಇಲ್ಲ ಎಂದು ಶರತ್ ಪವಾರ್ ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಗಳ ಬಗ್ಗೆ ದೇಶದ ಜನತೆಗೆ ಅನುಮಾನ ಇಲ್ಲ, ಆದರೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕರಣದಲ್ಲಿ ನಡೆದುಕೊಂಡ ರೀತಿ ಜನರಲ್ಲಿ ಗೊಂದಲ ಉಂಟುಮಾಡಿತ್ತು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.