ದೇಶ

ನೋಡೋಕೆ ಚನ್ನಾಗಿಲ್ಲ ಅಂತ 'ಕಿಸ್' ಮಾಡುವಾಗ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ತುಂಬು ಗರ್ಭೀಣಿ!

ಇಷ್ಟವಿಲ್ಲದ ಮದುವೆಯಾಗಿ ಆತನೊಂದಿಗೆ ಎರಡು ವರ್ಷಗಳಿಂದ ಸಂಸಾರ ಮಾಡಿ ಕೊನೆಗೆ ಕೋಪದಲ್ಲಿ ಗಂಡ ನಾಲಿಗೆಯನ್ನು 8 ತಿಂಗಳ ಗರ್ಭಿಣಿ ಕಚ್ಚಿ ಗಾಯ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ನೋಡೋಕೆ ಚನ್ನಾಗಿಲ್ಲ ಅಂತ 'ಕಿಸ್' ಮಾಡುವಾಗ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ತುಂಬು ಗರ್ಭೀಣಿ!
ಸಂಗ್ರಹ ಚಿತ್ರ
Published On :
ನವದೆಹಲಿ: ಇಷ್ಟವಿಲ್ಲದ ಮದುವೆಯಾಗಿ ಆತನೊಂದಿಗೆ ಎರಡು ವರ್ಷಗಳಿಂದ ಸಂಸಾರ ಮಾಡಿ ಕೊನೆಗೆ ಕೋಪದಲ್ಲಿ ಗಂಡ ನಾಲಿಗೆಯನ್ನು 8 ತಿಂಗಳ ಗರ್ಭಿಣಿ ಕಚ್ಚಿ ಗಾಯ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ರಣಹೋಲಾ ಪ್ರದೇಶದಲ್ಲಿ ಕಳೆದ ರಾತ್ರಿ ಗಂಡ-ಹೆಂಡತಿ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಪತ್ನಿ ಸಿಟ್ಟಿನಿಂದ ಕುಳಿತ್ತಿದ್ದಾಗ, ಸಮಾಧಾನ ಮಾಡಲು ಆತ ಪತ್ನಿಗೆ ಮುತ್ತಿಡಲು ಮುಂದಾಗಿದ್ದಾನೆ. ಈ ವೇಳೆ ಆಕೆ ಕೋಪದಲ್ಲಿ ಆತನ ಅರ್ಧ ನಾಲಿಗೆಯನ್ನು ಕಚ್ಚಿದ್ದು ನಾಲಿಗೆಗೆ ಗಂಭೀರ ಗಾಯವಾಗಿದೆ. 
ಗಂಡ ನೋಡಲು ಚನ್ನಾಗಿಲ್ಲ ಅಂತ ಪತ್ನಿ ಮನೆಯಲ್ಲಿ ಆತನ ಜೊತೆ ಗಲಾಟೆ ಮಾಡುತ್ತಿದ್ದಳು. ಇದೇ ರೀತಿ ಶನಿವಾರ ಆತ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾಗ ಮತ್ತೆ ಪತ್ನಿ ಜಗಳ ಮಾಡಿದ್ದು ಈ ವೇಳೆ ಈ ಘಟನೆ ನಡೆದಿದೆ. 
ಸದ್ಯ ಗಂಭೀರವಾಗಿ ಗಾಯಗೊಂಡಿರುವ 22 ವರ್ಷದ ಗಂಡನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾತನಾಡಲು ಸಾಧ್ಯವಾಗದೆ ಇರುವುದರಿಂದ ಆತ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.