ದೇಶ

ಮಾಜಿ ಪ್ರಧಾನಿ ಶಾಸ್ತ್ರಿ ನಿಗೂಢ ಸಾವಿನ ದಾಖಲೆಗಳ ಬಹಿರಂಗ ಕುರಿತು ಪ್ರಧಾನಿ, ಗೃಹ ಸಚಿವರು ನಿರ್ಧರಿಸಲಿ: ಸಿಐಸಿ

ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ಬಗ್ಗೆ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸುವ ಕುರಿತು ಪ್ರಧಾನ ಮಂತ್ರಿ ಹಾಗೂ ಗೃಹಸಚಿವರು.....

ಮಾಜಿ ಪ್ರಧಾನಿ ಶಾಸ್ತ್ರಿ ನಿಗೂಢ ಸಾವಿನ ದಾಖಲೆಗಳ ಬಹಿರಂಗ ಕುರಿತು ಪ್ರಧಾನಿ, ಗೃಹ ಸಚಿವರು ನಿರ್ಧರಿಸಲಿ: ಸಿಐಸಿ
ಲಾಲ್ ಬಹದ್ದೂರ್ ಶಾಸ್ತ್ರಿ
Published On :
ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ಬಗ್ಗೆ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸುವ ಕುರಿತು ಪ್ರಧಾನ ಮಂತ್ರಿ ಹಾಗೂ ಗೃಹಸಚಿವರು ನಿರ್ಧರಿಸಬೇಕು ಎಂದು  ಸಿಐಸಿ ಸೋಮವಾರ ತೀರ್ಪು ನೀಡಿತು.
ಭಾರತದ ಮಾಜಿ ಪ್ರಧಾನಿ ಶಾಸ್ತ್ರಿ ಜನವರಿ 11, 1966 ರಂದು ತಾಷ್ಕೆಂಟ್ ನಲ್ಲಿ ನಿಧನರಾಗಿದ್ದರು.
"ಶಾಸ್ತ್ರಿ ಮರಣದ ಕುರಿತ ಸಂಪೂರ್ಣ ದಾಖಲೆಗಳನ್ನು ಮಾಹಿತಿ ಹಕ್ಕು ಅಡಿ ಪರಿಗಣಿಸಿ ಬಹಿರಂಗಪಡಿಸುವ ವಿಚಾರವನ್ನು ಪ್ರಧಾನಿ ಹಾಗೂ ಗೃಹಸಚಿವರಿಗೆ ನಾವು ವಹಿಸಿಕೊಟ್ಟಿದ್ದೇವೆ." ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಹೇಳಿದರು.
ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ ಶಾಸ್ತ್ರಿ ಅವರ ಮರಣದ ಬಗ್ಗೆ ತನಿಖೆ ನಡೆಸಲು ರಾಜ್ ನಾರಾಯಣ್ ಸಮಿತಿ ರಚಿಸಲಾಗಿದ್ದು ಆದರೆ ಈ ಸಮಿತಿ ನೀಡಿರುವ ಯಾವ ದಾಖಲಾತಿಗಳೂ ರಾಜ್ಯಸಭೆಯ ಬಳಿ ಇಲ್ಲ ಎನ್ನುವುದು ಅಚ್ಚರಿದಾಯಕ ಸಂಗತಿ ಎಂದು ಅವರು ಹೇಳಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಪ್ರತಿಯೊಂದು ಶಬ್ದವೂ ಸಾರ್ವಜನಿಕ  ಡೊಮೈನ್ ನಲ್ಲಿ ದಾಖಲಾಗುತ್ತದೆಯಾದರೂ ಇಂತಹಾ ಮಹತ್ವದ ದಾಖಲೆ ಹೇಗೆ ಕಣ್ಮರೆಯಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಸಮಿತಿಯ ದಾಖಲೆಗಳನ್ನು ಸಂರಕ್ಷಿಸಲು ಅಥವಾ ಕ್ಣ್ಮರೆಯಾದ ದಾಖಲೆ ಸಂಬಂಧ ತನಿಖೆ ನಡೆಸಲು ಸಂಸತ್ತಿನ 'ಸಾಂವಿಧಾನಿಕ ಅಧಿಕಾರಿಗಳು' ಮುಂದಾಗಬೇಕು ಎಂದು ದು ಆಚಾರ್ಯುಲು ಶಿಫಾರಸು ಮಾಡಿದರು.
1965 ರ ಇಂಡೋ-ಪಾಕ್ ಯುದ್ಧದ ತರುವಾಯ ಪಾಕ್ ಅಧ್ಯಕ್ಷ  ಮುಹಮ್ಮದ್ ಆಯುಬ್ ಖಾನ್ ಹಾಗೂ ಶಾಸ್ತ್ರಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳ ಬಳಿಕ ಅವರು ತಾಷ್ಕೆಂಟ್ ನಲ್ಲಿ ಮೃತರಾದರು. ಅವರು ತೀವ್ರ ಹೃದಯಾಘಾತದಿಂದ ಮರಣಹೊಂದಿದರು ಎಂದೆನ್ನಲಾಗಿತ್ತಾದರೂ ಆ ದಿನಗಳಲ್ಲಿ ಉತ್ತುಂಗದಲ್ಲಿದ್ದ ಶೀತಲ ಸಮರ ಕಾರಣ ವಿದೇಶೀ ನೆಲದಲ್ಲಿ ಭಾರತೀಯ ನಾಯಕಾ ಸಾವನ್ನು ಪ್ರಶ್ನಿಸಲಾಗಿದೆ.
ಇತ್ತೀಚೆಗೆ ಆರ್ ಟಿಐ ಕಾಯ್ದೆಯಡಿ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತ ದಾಖಲೆ ಬಹಿರಂಗಪಡಿಸಲು ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಕೇಂದ್ರ ಸರ್ಕಾರ ಮಾತ್ರ ಇದು ರಹಸ್ಯ ಮತ್ತು ಬಹಿರಂಗಪಡಿಸಲಾಗದ ದಾಖಲೆಗಳಾಗಿದೆ.ಇದು ದೇಶದ ಹಿತಸಕ್ತಿಗೆ ಮಾರಕವಾಗಿದೆ ಎಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.