ಜಾರ್ಖಂಡ್: ನಕ್ಸಲರ ಭಯ, ಮನೆಗಳಿಗೆ ತೆರಳಲೂ ಹಿಂಜರಿಯುತ್ತಿರುವ ಗ್ರಾಮಸ್ಥರು!
ಒಂದೆಡೆ ಹತ್ಯೆ, ಮತ್ತೊಂದೆಡೆ ಬೆದರಿಕೆ, ಮಾವೋವಾದಿಗಳಿಂದ ಉಂಟಾಗುತ್ತಿರುವ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Published On :
ಜಾರ್ಖಂಡ್: ಒಂದೆಡೆ ಹತ್ಯೆ, ಮತ್ತೊಂದೆಡೆ ಬೆದರಿಕೆ, ಮಾವೋವಾದಿಗಳಿಂದ ಉಂಟಾಗುತ್ತಿರುವ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಜಾರ್ಖಂಡ್ ನಲ್ಲಿರುವ ಗ್ರಾಮವೊಂದರಲ್ಲಿ ಇಡೀ ಗ್ರಾಮಸ್ಥರು ಮಾವೋವಾದಿಗಳಿಗೆ ಭಯಗೊಂಡು ಮನೆಗಳನ್ನು ತೊರೆದಿದ್ದಾರೆ.
ಮನೆಗಳನ್ನು ತೊರೆಯುವಂತೆ ನಕ್ಸಲರು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದು, ಬೆದರಿಕೆಯಿಂದ ಆತಂಕಕ್ಕೊಳಗಾಗಿರುವ ಗುರಬಂದ ಗ್ರಾಮಸ್ಥರು ತಮ್ಮ ಮನೆಗೆ ತಾವೇ ಹೊಗಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಸ್ಥರು ಮನೆಗಳನ್ನು ತೊರೆದಿರುವುದರಿಂದ ಮನೆಗಳನ್ನು ನಾಶ ಮಾಡಲಾಗುತ್ತಿದ್ದು, ನಕ್ಸಲರು ಗ್ರಾಮಸ್ಥರಿಗೆ ಸೇರಿದ್ದ ಕೃಷಿ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ.
ನನ್ನ ಮನೆಯನ್ನು ನಕ್ಸಲರು 2004 ರಲ್ಲಿ ನಾಶ ಮಾಡಿದ್ದರು. ಅಷ್ಟೇ ಅಲ್ಲದೇ ನನ್ನನ್ನು ಹತ್ಯೆ ಮಾಡುವುದಕ್ಕೂ ಯತ್ನಿಸಿದ್ದರು. ನನ್ನನ್ನು, ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವುದಕ್ಕೆ ನಾನು ಗ್ರಾಮವನ್ನು ತೊರೆಯಬೇಕಾಯಿತು, ಈಗ ನಾನು ಜೀವಿಸುವುದಕ್ಕೆ ಜಾಗವೇ ಇಲ್ಲದಂತಾಗಿದೆ, ನಮ್ಮದೇ ಸ್ವಂತ ಕೃಷಿ ಭೂಮಿ ಇದ್ದರೂ ನಾವು ಬೇರೆಯವರ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


