ದೇಶ

ಭಯಾನಕ ವಿಡಿಯೋ: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕಣ್ಣ ಮುಂದೆ ನಾಲ್ವರು ಜಲಸಮಾಧಿ!

ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದ್ದ ಯುವಕರು ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗುತ್ತಿರುವ ವಿಡಿಯೋ ಭಯಾನಕವಾಗಿದೆ...

ಭಯಾನಕ ವಿಡಿಯೋ: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕಣ್ಣ ಮುಂದೆ ನಾಲ್ವರು ಜಲಸಮಾಧಿ!
ಸಂಗ್ರಹ ಚಿತ್ರ
Published On :
ಗ್ವಾಲಿಯಾರ್(ಮಧ್ಯಪ್ರದೇಶ): ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದ್ದ ಯುವಕರು ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗುತ್ತಿರುವ ವಿಡಿಯೋ ಭಯಾನಕವಾಗಿದೆ. 
ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಕೆರೆಯಲ್ಲಿ ಯುವಕರು ಗಣಪತಿ ವಿಸರ್ಜನೆಗೆ ತೆರಳಿದ್ದಾರೆ. ಈ ವೇಳೆ ನಾಲ್ವರು ಯುವಕರು ಕೆರೆಯಲ್ಲಿ ಮುಳುಗಿದ್ದಾರೆ. ಇದನ್ನು ಸ್ಥಳೀಯೊಬ್ಬರು ಚಿತ್ರೀಕರಿಸಿದ್ದು ವಿಡಿಯೋ ದೃಶ್ಯಗಳು ಎದೆ ನಡುಗಿಸುತ್ತದೆ. 
ಮೃತರನ್ನು ಅಜಯ್ ಪಾಲ್, ಸತೀಶ್ ಬಾಘೆಲ್, ಸೂರಜ್ ಪಾಲ್ ಹಾಗೂ ಶುಭಂ ಗೌರ್ ಎಂದು ಗುರುತಿಸಲಾಗಿದೆ. ಮಹಾರಾಜಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 
ಗಣಪತಿ ಮೂರ್ತಿಯನ್ನು ಮುಳುಗಿಸಲು ಕೊಂಚ ದೂರ ತೆರಳಿದ್ದ ಯುವಕರಲ್ಲಿ ಇಬ್ಬರು ಅಲ್ಲೇ ಮುಳುಗಿದ್ದಾರೆ. ಇವರ ರಕ್ಷಣೆಗಾಗಿ ಬಂದ ಮತ್ತಿಬ್ಬರು ಯುವಕರು ಸಹ ಮುಳುಗಿದ್ದಾರೆ. ನೋಡ ನೋಡುತ್ತಿದ್ದಂತೆ ನಾಲ್ವರು ಯುವಕರು ಜಲಸಮಾಧಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.