ಸರ್ಜಿಕಲ್ ಸ್ಟ್ರೈಕ್ ದ್ವಿತೀಯ ವಾರ್ಷಿಕೋತ್ಸವ ಆಚರಣೆಗೆ ಸರ್ಕಾರ ನಿರ್ಧಾರ!
ಸೆಪ್ಟೆಂಬರ್ 29 ರಂದು 'ಸರ್ಜಿಕಲ್ ಸ್ಟ್ರೈಕ್'ನ ಎರಡನೇ ವಾರ್ಷಿಕೋತ್ಸವವನ್ನು ಮೋದಿ ಸರಕಾರವು ಆಚರಿಸಲಿದೆ ಎಂದು ಕೇಂದ್ರ ಸಚಿವ ಪಿಯುಶ್ ಗೋಯಲ್ ಬುಧವಾರ ತಿಳಿಸಿದ್ದಾರೆ.

Published On :
ನವದೆಹಲಿ: ಸೆಪ್ಟೆಂಬರ್ 29 ರಂದು 'ಸರ್ಜಿಕಲ್ ಸ್ಟ್ರೈಕ್'ನ ಎರಡನೇ ವಾರ್ಷಿಕೋತ್ಸವವನ್ನು ಮೋದಿ ಸರ್ಕಾರವು ಆಚರಿಸಲಿದೆ ಎಂದು ಕೇಂದ್ರ ಸಚಿವ ಪಿಯುಶ್ ಗೋಯಲ್ ಬುಧವಾರ ತಿಳಿಸಿದ್ದಾರೆ.
2016ರಲ್ಲಿ ಭಾರತೀಯ ಕಮಾಂಡೋಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ಮಾಡಿ ನಾವು ಜಗತ್ತಿಗೆ ನಮ್ಮ ಸಾಮರ್ಥ್ಯವನ್ನು ತೋರಿದ್ದೇವೆ ಎಂದು ರೈಲ್ವೆ ಸಚಿವ ಗೋಯಲ್ ಹೇಳಿದ್ದಾರೆ.
"ಈ ತಿಂಗಳ 29 ನೇ ದಿನದಲ್ಲಿ ನಾವು ಅರ್ಜಿಕಲ್ ಸ್ಟ್ರೈಕ್ ಎರಡನೇ ವರ್ಷ ಪೂರ್ಣಗೊಳಿಸುತ್ತಿದ್ದೇವೆ. ನಾವು ಆ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ" ಪ್ರಿಯದರ್ಶಿನಿ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದರು.
"ಪ್ರತಿಯೊಬ್ಬ ನಾಗರಿಕರನ್ನು ರಕ್ಷಿಸುವ ನಾಯಕನ ಕೈಯಲ್ಲಿದೇಶವಿದ್ದು ದೇಶಕ್ಕೆ ಉತ್ತಮ ನಾಯಕತ್ವ ದೊರಕಿದೆ." ಗೋಯಲ್ ಹೇಳಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಹಿನ್ನೆಲೆಯ ಕಥೆಯುಳ್ಳ ಚಿತ್ರ ತಯಾರಿಸಿದ್ದ ವ್ಯಾಪಾರೋದ್ಯಮಿ ರೋನಿ ಸ್ಕ್ರೂವಾಲಾ ಅವರನ್ನು ಶ್ಲಾಘಿಸಿದ ಸ್ಚಿವರು ಈ ಚಿತ್ರ ಭಾರತ ಯುವಜನತೆಗೆ ಸ್ಪೂರ್ತಿಯಾಗಲಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Piyush GoyalSurgical strikesಸರ್ಜಿಕಲ್ ಸ್ಟ್ರೈಕ್ಪಿಯೂಷ್ ಗೋಯಲ್2nd anniversary of surgical strikeಸರ್ಜಿಕಲ್ ಸ್ಟ್ರೈಕ್ ದ್ವಿತೀಯ ವಾರ್ಷಿಕೋತ್ಸವ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


