ಹಾರ್ದಿಕ್ ಪಟೇಲ್ ಗೆ ನೀರು ಕೊಟ್ಟಿದ್ದು ಯಾರು? ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ!
ಗಾಂಧಿನಗರ ಪುರಸಭೆಯ ಗುಮಾಸ್ತರ ಹುದ್ದೆಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾರ್ದಿಕ್ ಪಟೇಲ್ ಗೆ ಸಂಬಂಧಿಸಿದ ಪ್ರಶ್ನೆ ಕೇಳಿರುವುದು ಈಗಾ ಭಾರಿ ...

Published On :
ಅಹಮದಾಬಾದ್: ಗಾಂಧಿನಗರ ಪುರಸಭೆಯ ಗುಮಾಸ್ತರ ಹುದ್ದೆಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾರ್ದಿಕ್ ಪಟೇಲ್ ಗೆ ಸಂಬಂಧಿಸಿದ ಪ್ರಶ್ನೆ ಕೇಳಿರುವುದು ಈಗಾ ಭಾರಿ ವಿವಾದಕ್ಕೆ ಕಾರಣವಾಗಿದೆ.
ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಇತ್ತಿಚೆಗೆ 19 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರಿಗೆ 'ನಿರಶನವನ್ನು ಕೊನೆಗೊಳಿಸಲು ಯಾವ ನಾಯಕ ಅವರಿಗೆ ನೀರು ಕೊಟ್ಟರು' ಎಂಬ ಪ್ರಶ್ನೆಯನ್ನು ಕೇಳಲಾಗಿದೆ.
ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ ಮುಗಿಸಲು ನೀರು ಕೊಟ್ಟ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ನಾಲ್ಕು ಆಯ್ಕೆಗಳಿದ್ದವು. ಅವೆಂದರೆ 1. ಶರದ್ ಯಾದವ್, 2. ಶತ್ರುಘ್ನ ಸಿನ್ಹಾ, 3. ಲಾಲು ಪ್ರಸಾದ್ ಯಾದವ್, 4. ವಿಜಯ್ ರೂಪಾಣಿ. ಸರಿಯಾದ ಉತ್ತರ ಜೆಡಿಯು ನ ಶರದ್ ಯಾದವ್ ಎಂಬುದಾಗಿತ್ತು.
25 ವರ್ಷದ ಹಾರ್ದಿಕ್ ಅವರು ಕಳೆದ ಆಗಸ್ಟ್ 25ರಂದು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
waterನೀರುquestion paperಪ್ರಶ್ನೆ ಪತ್ರಿಕೆHardik Patelಹಾರ್ದಿಕ್ ಪಟೇಲ್competitive examinationಸ್ಪರ್ದಾತ್ಮಕ ಪರೀಕ್ಷೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


