ತಮಿಳುನಾಡು: ವರನಿಗೆ ಗೆಳೆಯರಿಂದ ಸ್ಪೆಷಲ್ ಗಿಫ್ಟ್; 5 ಲೀಟರ್ ಪೆಟ್ರೋಲ್!
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾಗಿರುವ ದಿನಗಳಲ್ಲಿ ತಮಿಳುನಾಡಿನ ಕುದ್ದಲೂರಿನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ವರನಿಗೆ ಆತನ ಗೆಳೆಯರು 5 ಲೀಟರ್ ಪೆಟ್ರೋಲ್ ನ್ನು ಸ್ಪೆಷಲ್ ಗಿಫ್ಟ್ ಆಗಿ ನೀಡಿದ್ದಾರೆ.

ಚೆನ್ನೈ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾಗಿರುವ ದಿನಗಳಲ್ಲಿ ತಮಿಳುನಾಡಿನ ಕುದ್ದಲೂರಿನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ವರನಿಗೆ ಆತನ ಗೆಳೆಯರು 5 ಲೀಟರ್ ಪೆಟ್ರೋಲ್ ನ್ನು ಸ್ಪೆಷಲ್ ಗಿಫ್ಟ್ ಆಗಿ ನೀಡಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಭಾರತ್ ಬಂದ್ ನಡೆಸಿದ್ದರೂ ಕೂಡಾ ಏನೂ ಪ್ರಯೋಜನವಾಗಿಲ್ಲ, ತೈಲ ಬೆಲೆ ಏರುತ್ತಲ್ಲೇ ಇದ್ದು, ಗ್ರಾಹಕರ ಜೇಬು ಸುಡುತ್ತಿದೆ.
ಇಂತಹ ದುಬಾರಿ ದುನಿಯಾದಲ್ಲಿ ವಿವಾಹವಾಗುತ್ತಿರುವ ನವ ಜೋಡಿ ಹರಸಲು ಬಂದಿದ್ದ ಸ್ನೇಹಿತರು ಅರತಕ್ಷತೆಯಲ್ಲಿ ಐದು ಲೀಟರ್ ಪೆಟ್ರೋಲ್ ಗಿಫ್ಟ್ ನೀಡಿದ್ದಾರೆ ಎಂದು ಪುತಿಯಾ ತಲೈಮುರೈ ತಮಿಳು ವಾಹಿನ ಸುದ್ದಿ ವರದಿ ಮಾಡಿದೆ.
ತಮ್ಮ ಸ್ನೇಹಿತರಿಂದ ಪೆಟ್ರೋಲ್ ಗಿಪ್ಟ್ ಪಡೆಯುತ್ತಿರುವ 39 ಸೆಕೆಂಡ್ ಗಳ ವಿಡಿಯೋ ವನ್ನು ಸುದ್ದಿವಾಹಿನಿಯಲ್ಲಿ ತೋರಿಸಲಾಗಿದೆ.
ತಮಿಳುನಾಡಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 85.15 ರೂ. ಆಗಿದೆ. ಇಂತಹ ಸಂದರ್ಭದಲ್ಲಿ ಮೌಲ್ಯಯುತ ವಸ್ತುವನ್ನು ಗಿಪ್ಟ್ ಆಗಿ ನೀಡಬೇಕೆಂಬ ಉದ್ದೇಶದಿಂದ ಐದು ಲೀಟರ್ ಪೆಟ್ರೋಲ್ ಅನ್ನು ವಿಶೇಷ ಗಿಪ್ಟ್ ಆಗಿ ನೀಡಲಾಗಿದೆ ಎಂದು ಸ್ನೇಹಿತರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


