ದೇಶ

ಮತ್ತೆ ಕಮರ್ಷಿಯಲ್ ಲಾಂಚ್ ನತ್ತ ಮುಖ ಮಾಡಿದ ಇಸ್ರೋ: ಬ್ರಿಟನ್ ಉಪಗ್ರಹ ಉಡಾವಣೆ!

ವಿದೇಶಿ ಉಪಗ್ರಹಗಳನ್ನು ಉಡವಾಣೆ ಮಾಡುವುದರಲ್ಲಿ ದಾಖಲೆ ನಿರ್ಮಿಸಿರುವ ಇಸ್ರೋ ಈಗ ಮತ್ತೊಂದು ವಿದೇಶಿ ಉಪಗ್ರಹವನ್ನು ಉಡಾವಣೆ ಮಾಡುವುದಕ್ಕೆ ಸಜ್ಜುಗೊಂಡಿದೆ.

ಮತ್ತೆ ಕಮರ್ಷಿಯಲ್ ಲಾಂಚ್ ನತ್ತ ಮುಖ ಮಾಡಿದ ಇಸ್ರೋ: ಬ್ರಿಟನ್ ಉಪಗ್ರಹ ಉಡಾವಣೆ!
ಮತ್ತೆ ಕಮರ್ಷಿಯಲ್ ಲಾಂಚ್ ನತ್ತ ಮುಖ ಮಾಡಿದ ಇಸ್ರೋ: ಬ್ರಿಟನ್ ಉಪಗ್ರಹ ಉಡಾವಣೆ!
Published On :
ವಿದೇಶಿ ಉಪಗ್ರಹಗಳನ್ನು ಉಡವಾಣೆ ಮಾಡುವುದರಲ್ಲಿ ದಾಖಲೆ ನಿರ್ಮಿಸಿರುವ ಇಸ್ರೋ ಈಗ ಮತ್ತೊಂದು ವಿದೇಶಿ ಉಪಗ್ರಹವನ್ನು ಉಡಾವಣೆ ಮಾಡುವುದಕ್ಕೆ ಸಜ್ಜುಗೊಂಡಿದೆ. 
ಭೂ ವೀಕ್ಷಣೆಗಾಗಿ ಇರುವ ಬ್ರಿಟನ್ ನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಜವಾಬ್ದಾರಿಯನ್ನು ಇಸ್ರೋ ಹೊತ್ತುಕೊಂಡಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ರಾತ್ರಿ 10:00 ಗಂಟೆ ವೇಳೆಗೆ  ನೋವಾಸರ್ ಮತ್ತು ಎಸ್ 1-4 ಉಡಾವಣೆ ಮಾಡಲಾಗುತ್ತದೆ. 
ಉಪಗ್ರಹ ನಿಗಾವಹಿಸುವ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಪ್ರತಿ ಬಾರಿ ಸಂಚರಿಸಿದಾಗಲೂ ಸೂರ್ಯನ ಬೆಳಕಿನ ಆಂಗಲ್(ಕೋನ) ಒಂದೇ ರೀತಿಯಲ್ಲಿರುವಂತೆ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದ್ದು, ಅರಣ್ಯ ಸಮೀಕ್ಷೆ, ಪ್ರವಾಹ, ಭೂಕಂಪ, ಕಾಳ್ಗಿಚ್ಚಿನಂತಹ ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಈ ಉಪಗ್ರಹಗಳು ಸಹಕಾರಿಯಾಗಲಿವೆ. 2019 ರ ಮಾರ್ಚ್ ವರೆಗೂ ಇಸ್ರೋ 19 ಮಿಷನ್ ಗಳನ್ನು ಪಟ್ಟಿಯಲ್ಲಿ ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.