ದೇಶ

ವರದಕ್ಷಿಣೆ ದೂರು: 'ಸಿಟ್ಟು' ಹಾಗೂ 'ಸೇಡಿನ' ಉದ್ದೇಶದಿಂದ ಕಾನೂನು ದುರ್ಬಳಕೆ ಸಲ್ಲದು ಎಂದ ಸುಪ್ರೀಂ

ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ಬಂಧನ ಮಾಡಬಾರದೆನ್ನುವ ತನ್ನ ಹಿಂದಿನ ತೀರ್ಪನ್ನು ಮಾರ್ಪಾಡುಗೊಳಿಸಿ ಶುಕ್ರವಾರ ಆದೇಶಿಸಿದ್ದ ಸುಪ್ರೀಂ ಕೋರ್ಟ್ ಇಂದು....

ವರದಕ್ಷಿಣೆ ದೂರು: 'ಸಿಟ್ಟು' ಹಾಗೂ 'ಸೇಡಿನ' ಉದ್ದೇಶದಿಂದ ಕಾನೂನು ದುರ್ಬಳಕೆ ಸಲ್ಲದು ಎಂದ ಸುಪ್ರೀಂ
ಸುಪ್ರೀಂ ಕೋರ್ಟ್
Published On :
ನವದೆಹಲಿ: ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ಬಂಧನ ಮಾಡಬಾರದೆನ್ನುವ ತನ್ನ ಹಿಂದಿನ ತೀರ್ಪನ್ನು ಮಾರ್ಪಾಡುಗೊಳಿಸಿ ಶುಕ್ರವಾರ ಆದೇಶಿಸಿದ್ದ ಸುಪ್ರೀಂ ಕೋರ್ಟ್ ಇಂದು (ಶನಿವಾರ) "ಸಿಟ್ಟು" ಹಾಗೂ "ಸೇಡ"ನ್ನು ಹಿನ್ನೆಲೆಯಾಗಿಟ್ಟುಕೊಂಡು ತಾನು ನೀಡಿದ ತೀರ್ಪನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಎಚ್ಚರಿಸಿದೆ.
ಎಂತಹಾ ಪರಿಸ್ಥಿತಿಯಲ್ಲಿಯೂ ನ್ಯಾಯಾಲಯಗಳು ತಮ್ಮ ಕಣ್ಣು, ಕಿವಿಗಳನ್ನು ಸದಾ ತೆರೆದಿಡಲಿವೆ. ಸಂತ್ರಸ್ಥರ ಹೆಸರಲ್ಲಿ ಅನುಕಂಪ ಗಿತ್ಟಿಸಿಕೊಂಡು ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮತ್ತು ಡಿ.ಯು.ಚಂದ್ರಚೂಡ್  ಅವರನ್ನೊಳಗೊಂಡ ಪೀಠ ಹೇಳಿದೆ.
ವಿವಾಹಿತ ಸ್ತ್ರೀ ಮೇಲೆ ನಡೆಯುವ ದೌರ್ಜನ್ಯ ತಡೆಗಾಗಿ 1983ರಲ್ಲಿಯೇ ಐಪಿಸಿ ಸೆಕ್ಷನ್ 498ಎ ಅನ್ನು ಅನುಷ್ಠಾನಗೊಳಿಸಲಾಗಿದೆ. ಅದರೆ ಮಹಿಳೆ ಹಾಗೂ ಅವರ ಕಡೆಯವರು ಈ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಗಂಡಂದಿರ ಮೇಲೆ ಕೌಟುಂಬಿಕ ದೌರ್ಜನ್ಯ ತಡೆಯುವುದಕ್ಕೆ ಹಾಗೂ ಪುರುಷರಿಗೆ ರಕ್ಷಣೆ ಒದಗಿಸಲು ಹೊಸ ಕಾನೂನು ಅಗತ್ಯವಿದೆ. ಸೆಕ್ಷನ್ 498ಎ ಅಡಿಯಲ್ಲಿನ "ಕಿರುಕುಳ" ಎನ್ನುವ ಶಬ್ದ ಅತ್ಯಂತ ಸೂಕ್ಷ್ಮ ಪದವಾಗಿದ್ದು ಪೋಲೀಸರ ಉತ್ಪ್ರೇಕ್ಷೆಯ ಕಾರಣದಿಂದ ವಿನಾಕಾರಣ ಗಂಡಂದಿರು ಜೈಲುಪಾಲಾಗುವ ಸಾಧ್ಯತೆ ಇದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಹೀಗಾಗಿ ಕಾನೂನು ದುರ್ಬಳಕೆ ಆಗದಂತೆ ಸೂಕ್ತ "ಸಂರಕ್ಷಣಾ ಕ್ರಮ" ಗಳನ್ನು ಜಾರಿಗೆ ತರಬೇಕೆಂದು ನ್ಯಾಯಾಲಯ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.