ದೇಶ

ಪಾಸಿಂಗ್ ಔಟ್ ಪರೇಡ್ ಬಳಿಕ ಬೆಂಗಳೂರು ಯೋಧನಿಂದ ಪ್ರೇಯಸಿಗೆ ಪ್ರಪೋಸ್, ಫೋಟೋ ವೈರಲ್

ಬೆಂಗಳೂರು ಮೂಲದ ಯೋಧರೊಬ್ಬರು ತನ್ನ ಕನಸಂತೆ ಸೇನೆಗೆ ಸೇರಿದ ಬಳಿಕ ಸಮವಸ್ತ್ರದಲ್ಲೇ ತನ್ನ ಪ್ರಿಯತಮೆಗೆ...

ಪಾಸಿಂಗ್ ಔಟ್ ಪರೇಡ್ ಬಳಿಕ ಬೆಂಗಳೂರು ಯೋಧನಿಂದ ಪ್ರೇಯಸಿಗೆ ಪ್ರಪೋಸ್, ಫೋಟೋ ವೈರಲ್
ಠಾಕೂರ್ ಚಂದ್ರೇಶ್ ಸಿಂಗ್ - ಧಾರ
Published On :
ಚೆನ್ನೈ: ಬೆಂಗಳೂರು ಮೂಲದ ಯೋಧರೊಬ್ಬರು ತನ್ನ ಕನಸಂತೆ ಸೇನೆಗೆ ಸೇರಿದ ಬಳಿಕ ಸಮವಸ್ತ್ರದಲ್ಲೇ ತನ್ನ ಪ್ರಿಯತಮೆಗೆ ಪ್ರಪೋಸ್ ಮಾಡಿದ್ದು, ಇದೀಗ ಈ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಶನಿವಾರ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ ಬಳಿಕ ಯೋಧ  ಠಾಕೂರ್ ಚಂದ್ರೇಶ್ ಸಿಂಗ್ ಅವರು ತನ್ನ ಪ್ರೇಯಸಿ ಧಾರ ಮೆಹ್ತಾ ಅವರಿಗೆ ಪ್ರಪೋಸ್ ಮಾಡಿದ್ದರು. 
ಭಾರತೀಯ ಸೇನೆಯ ರಜಪುತ್ ರೈಫಲ್ಸ್ ಸೇರಿದ ಠಾಕೂರ್ ಚಂದ್ರೇಶ್ ಸಿಂಗ್ ಪಾಸಿಂಗ್ ಔಟ್ ಪರೇಡ್ ಮುಗಿದ ಬಳಿಕ ತನ್ನ ಪ್ರೇಯಸಿ ಧಾರ ಬಳಿಗೆ ಬಂದು ಮೊಣಕಾಲೂರಿ, ಆಕೆಯ ಕೈಗೆ ಮುತ್ತು ಕೊಡುವ ಮೂಲಕ ಪ್ರಪೋಸ್ ಮಾಡಿದ್ದರು.
ಚಂದ್ರೇಶ್ ಸಿಂಗ್ ಅವರು ಈ ವೇಳೆ ತೆಗೆದ ಫೋಟೋಗಳನ್ನು ಇನ್‍ಸ್ಟಾಗ್ರಾಂ ನಲ್ಲಿ ಹಾಕಿದ್ದು, ಯೋಧನ ಸಾಧನೆ ಬಗ್ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಪಾಸಿಂಗ್ ಔಟ್ ಪರೇಡ್ ದಿನ ಪೋಷಕರನ್ನು ಕರೆದುಕೊಂಡು ಬರುವಂತೆ ಧಾರಗೆ ತಿಳಿಸಿದ್ದೆ ಎಂದು ಚಂದ್ರೇಶ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪ್ರೀತಿಯ ಹೆಜ್ಜೆ ಗುರುತುಗಳನ್ನು ತೆರೆದಿಟ್ಟಿದ್ದಾರೆ.
ಕಳೆದ ಮೂರುವರೆ ವರ್ಷಗಳಿಂದ ನಾವು ಪ್ರೀತಿಸುತ್ತಿದ್ದೇವು. ಆದರೆ ಮೊದಲು ನಾನು ಭಾರತೀಯ ಸೇನೆ ಸೇರುವ ನನ್ನ ಕನಸನ್ನು ನನಸು ಮಾಡಬೇಕು ಎಂದು ನಿರ್ಧರಿಸಿದ್ದೆ ಎಂದು ಚಂದ್ರೇಶ್ ಸಿಂಗ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.